ಡಿ.೧೩ ರಿಂದ ಹಂಪಿ ವಿರುಪಾಕ್ಷೇಶ್ವರ ಫಲಪೂಜಾ ಮಹೋತ್ಸವ

ದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕ್ಷೇತ್ರದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಫಲಾಪೂಜಾ ಮಹೋತ್ಸವ ಡಿ.೧೩ ರಿಂದ ನಡೆಯಲಿದೆ. ಫಲಪೂಜಾ ಮಹೋತ್ಸವದ ಅಂಗವಾಗಿ ಡಿ.೧೩ ರ ರಾತ್ರಿ ೦೮.೩೦ ಗಂಟೆಗೆ ಮನ್ಮುಖ ತೀರ್ಥದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ ಹಾಗೂ ಡಿ.೧೫ ರಂದು ರಾತ್ರಿ ೧೦ ಗಂಟೆಗೆ ಶ್ರೀ ಚಕ್ರ ತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಜರುಗಲಿದೆ. ಅಲ್ಲದೆ ಡಿ.೧೩ ರಿಂದ ೧೫ ರವರೆಗೆ ನಡೆಯುವ ಈ ಫಲಪೂಜಾ ಮಹೋತ್ಸವದಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯವರಿಗೆ ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು. ಫಲಪೂಜಾ ನಂತರ ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ. ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಕಾರ್ಯ ಜರುಗಲಿದ್ದು, ದವಸ ಧಾನ್ಯಗಳನ್ನು ಕೊಡಲಿಚ್ಛಿಸುವ ಭಕ್ತಾದಿಗಳು ದೇವಸ್ಥಾನದ…

Read More