ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಹೇಮಪ್ಪ ಚಿತ್ರಗಾರ ಆಯ್ಕೆ

ಕೊಪ್ಪಳ, ಏ, ೦೭ ಜಿಲ್ಲೆಯ ವಿಶ್ವ ಪ್ರಸಿದ್ಧ ಕಲೆಯಲ್ಲಿ ಹೆಸರು ಮಾಡಿರುವ ಕಿನ್ನಾಳ ಗ್ರಾಮದ ಹೇಮಪ್ಪ ಜಿ. ಚಿತ್ರಗಾರ ಅವರು ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ದಿ.೧೦ ರ ರವಿವಾರ ಗೋವಾದ ಬಿಚ್ಚೋಲಿ ಮಹಾನಗರದಲ್ಲಿ ಗೋವಾ ಕನ್ನಡಿಗರ ಬೃಹತ ಸಾಂಸ್ಕೃತಿಕ ಸಮ್ಮೇಳನದಲ್ಲಿ ಈ ಮಹತ್ವದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ೩೭ ವರ್ಷ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತಿ. ೪೦ ವರ್ಷಗಳ ಕಿನ್ನಾಳದ ಸಾಂಪ್ರದಾಯಿಕ ಕಲೆಯಲ್ಲಿ ಅನುಭವ ಹಾಗೂ ಸೇವೆ.  ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ತಿಯ ಚಿತ್ರಗಾರ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೫ ವರ್ಷಗಳ ಸೇವೆ. ೩ ವರ್ಷ ಕೊಪ್ಪಳ ಜಿಲ್ಲಾ ಶ್ರಮ ಶಕ್ತಿ ಯೋಜನೆ ಜಿಲ್ಲಾ ಮಟ್ಟದ  ಅನುಷ್ಠಾನ ಸಮಿತಿಯ ಸದಸ್ಯರಾಗಿ ಸೇವೆ.  ಸ್ಥಳಿಯ ಸೋಮವಂಶ ಆರ್ಯ ಕ್ಷತ್ತಿಯ ಚಿತ್ರಗಾರ ಸಮಾಜದ ಅಧ್ಯಕ್ಷರಾಗಿ ೪ ವರ್ಷ ಸೇವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ…

Read More