ಕತ್ತೆಗೊಂದು ಕಾಲ! ಕೊಪ್ಪಳ, ಗದುಗಿನಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ!!

ಕತ್ತೆಗೇನು ಗೊತ್ತು ಕಸ್ತೂರಿಯ ವಾಸನೆ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆ ಮಾತು ಇಂದಿನ ಆಧುನಿಕ ದಿನಗಳಲ್ಲಿ ಮಾರ್ಪಾಡು ಆದಂತೆ ಕಾಣುತ್ತಿದೆ. ತಾಯಿ ಹಾಲು, ಗೋವಿನ ಅಮೃತಕ್ಕೆ ಸಮಾನ ಎನ್ನಲಾಗುತ್ತಿದೆ ಆದರೆ ಈ ಪಂಕ್ತಿಗೆ ಇದೀಗ ಕತ್ತೆ ಹಾಲೂ ಅಮೃತಕ್ಕೆ ಸಮ ಎಂಬ ಮಾತುಗಳು ಈಗ ಗದಗ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಗದಗ ಜಿಲ್ಲೆಯಲ್ಲಿ ಇದೀಗ ಕತ್ತೆ ಹಾಲಿಗೆ ಭಾರೀ ಬೇಡಿಕೆ ಕೇಳಿ ಬರುತ್ತಿದೆ. ಕತ್ತೆ ಹಾಲು ಕುಡಿದರೆ ಸೌಂದರ್ಯ ಹೆಚ್ಚುವದು, ಕತ್ತೆ ಮುಖದಂತಿರುವವರು ಕತ್ತೆ ಹಾಲು ಕುಡಿದರೆ ಅವರ ಸೌಂದರ್ಯ ಹೆಚ್ಚುವದು ಹಾಗೂ ರಾಜ್ಯದಲ್ಲಿ ಕೇಳಿ ಬರುತ್ತಿರುವ ಎಚ್೧ ಎನ್೧, ಡೆಂಘಿ, ಚಿಕೂನ್ ಗುನ್ಯಾದಂತಹ ರೋಗಗಳು ತಗಲದಂತೆ ರೋಗ ಪ್ರತಿನಿರೋಧಕವಾಗಿ ಈ ಹಾಲನ್ನು ಕುಡಿದರೆ ರೋಗ ಬರದು ಎಂಬ ಮಾತು ಪ್ರಬಲಗೊಂಡಿದ್ದೇ ಕತ್ತೆ ಹಾಲಿಗೆ ಬಂದಿದೆ ಭಾರೀ ಬೇಡಿಕೆ. ಹೊತ್ತು ಬಂದಾಗ ಕತ್ತೆ ಕಾಲು…

Read More