ಮೈತ್ರಿ ಸಿನಿಮಾ ವಿಮರ್ಶೆ “ಪುನೀತ”ಭಾವ : ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ

       ಜೈಲರ್ : ರಿಮ್ಯಾಂಡ್ ಹೋಮ್ ಸೇರಿರೋ ಮಕ್ಕಳು ಮುಂದೆ ಬಿಡುಗಡೆಯಾದರೂ ಮತ್ತೆ ಯಾವುದಾದರೂ ಕ್ರೈಂ ಮಾಡಿ ಜೈಲಿಗೆ ಬರ‍್ತಾರೆ ಹೊರತು ಸಮಾಜಮುಖಿಯಾಗಲ್ಲ, ಯಾಕಂದ್ರೆ ಕ್ರೈಂ ಅನ್ನೋದು ಅವರ ರಕ್ತದಲ್ಲೇ ಇದೆ. ಶಿಕ್ಷೆ ಬಿಟ್ಟರೆ ಬೇರೆ ಏನೂ ಮಾಡೋಕಾಗಲ್ಲ.         ಪುನೀತ್ :  “ಮಕ್ಕಳ ಕೈಯಲ್ಲಿ ಗನ್ ಕೊಡೋ ಬದ್ಲು, ಪೆನ್ ಕೊಟ್ ನೋಡಿ, ಇತಿಹಾಸಾನೇ ಬರಿತಾರೆ”         ಮೈತ್ರಿ ಸಿನಿಮಾದ ಹೂರಣ ಇರೋದೇ ಈ ಭಾಗದಲ್ಲಿ. ಚಿತ್ರದ ಆರಂಭ ಸ್ಲಂಡಾಗ್ ಸಿನಿಮಾ ನೆನಪಿಸಿದರೂ ಮೈತ್ರಿಯ ಮಾರ್ಗವೇ ಬೇರೆ. ಸ್ಲಂನ ೫ ನೇ ಕ್ಲಾಸ್ ಹುಡುಗ ಸಿದ್ರಾಮ ಮಹಾನ್ ಕೀಟಲೆ, ಅಷ್ಟೇ ಬುದ್ಧಿವಂತ ಕೂಡಾ. ಅಪ್ಪು ಅಂದ್ರೆ ಪಂಚಪ್ರಾಣ. ಒಮ್ಮೆ ತಮ್ಮೂರಿಗೆ ಸಿನಿಮಾ ಶೂಟಿಂಗ್‌ಗೆ ಬಂದು ಅಪ್ಪು ನೋಡಲು ಶಾಲೆಗೆ ಚಕ್ಕರ್ ಹಾಕಿ ಗೆಳೆಯರೊಂದಿಗೆ ಹೋಗುವ ಸಿದ್ರಾಮನನ್ನ…

Read More