ಬ್ರಾಹ್ಮಣರ ಮಾಂಸಾಹಾರ ಸೇವನೆಯೂ… ಅಂಬೇಡ್ಕರರ ವಿಚಾರಗಳೂ… Part-2

ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ಬ್ರಾಹ್ಮಣರು ಯಾಗ ಮಾಡಿ ಮಾಂಸ ತಿಂದಿರುವುದು ರಾಜ್ಯಾದ್ಯಾಂತ ದೊಡ್ಡ ಸುದ್ದಿಯಾಗಿದೆ. ಸೋಮಯಾಗದಲ್ಲಿ ೮ ಆಡುಗಳನ್ನು ಬಲಿ ನೀಡಲಾಗಿದೆ, ಸೋಮರಸ (ಬಟ್ಟಿ ಇಳಿಸಿದ ಹೆಂಡ)ವನ್ನೂ ಕೂಡ ಸೇವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಸಂಚಲನ ಸೃಷ್ಟಿಸಿರುವ ಪ್ರಕರಣವಾಗಿದೆ. ಸಂಚಲನ, ಯಾಕೆಂದರೆ ಯಾವ ಸಮುದಾಯ ಸಂಪೂರ್ಣ ಸಸ್ಯಾಹಾರಿ ಎಂದು ಸಮಾಜ ನಂಬಿದೆಯೋ ಮತ್ತು ಅವರ ಸಸ್ಯಾಹಾರದ ಮೇಲೆ ಜನ ಮೇಲು- ಕೀಳು, ವೆಜ್ಜು-ನಾನ್ ವೆಜ್ಜು ಎಂದು ಭಿನ್ನಭೇದ ಆಚರಿಸುತ್ತಾರೋ ಅದರ ಬುಡ ಅಲ್ಲಾಡಲು ಇದರಿಂದ ಪ್ರಾರಂಭವಾಗಿದೆಯಲ್ಲ, ಜಾತಿವ್ಯವಸ್ಥೆ ಸಡಿಲಗೊಳ್ಳಲು ಇದು ಪ್ರೇರೇಪಣೆಯಾಗಿದೆಯಲ್ಲ ಎಂಬ ಕಾರಣಕ್ಕೆ ಇದು ಸಂಚಲನ. ಈ ನಿಟ್ಟಿನಲ್ಲಿ ಇದರ (ಬ್ರಾಹ್ಮಣರ ಮಾಂಸ ಸೇವನೆಯ) ಇತಿಹಾಸ, ಅದರಲ್ಲೂ ಬಾಬಾಸಾಹೇಬ್ ಅಂಬೇಡ್ಕರರು ಅಂತಹ ಇತಿಹಾಸವನ್ನು ದಾಖಲಿಸಿರುವುದರ ಬಗ್ಗೆ ತಿಳಿದಕೊಳ್ಳುವ ಅಗತ್ಯವಿದೆ. ತನ್ಮೂಲಕ ಜಾತಿವ್ಯವಸ್ಥೆಯ ನಾಶಕ್ಕೆ ನಮ್ಮದೂ ಕೂಡ ಪುಟ್ಟ ಕಾಣಿಕೆ ನೀಡುವ ಅಗತ್ಯವಿದೆ. ಅಂಬೇಡ್ಕರರೇನು ಉದ್ದೇಶಪೂರ್ವಕವಾಗಿ ಅಥವಾ…

Read More