ಬೆದರಿಕೆ, ದೌರ್ಜನ್ಯದಿಂದ ಆದಿರಾ ಘರ್‌ವಾಪ್ಸಿ

ಯೋಗ ಕೇಂದ್ರದಿಂದ ತಪ್ಪಿಸಿಕೊಂಡು ಬಂದ ಯುವತಿಯ ಹೇಳಿಕೆ

ತಿರುವನಂತಪುರಂ, : ಇಸ್ಲಾಂ ಧರ್ಮ ಸ್ವೀಕರಿಸುವ ಮೂಲಕ ಭಾರೀ ವಿವಾದಕ್ಕೀಡಾಗಿದ್ದ ಕಾಸರಗೋಡು ನಿವಾಸಿ ಆದಿರಾ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಈ ಮರು ಮತಾಂತರಕ್ಕೆ ಬೆದರಿಕೆ ಹಾಗೂ ದೌರ್ಜನ್ಯ ಕಾರಣ ಎಂಬ ಅಂಶ ಇದೀಗ ಬಯಲಾಗಿದೆ ಎಂದು ಮಳಯಾಲಂ ಸುದ್ದಿ ವಾಹಿನಿ ಮೀಡಿಯಾ ಒನ್ ವರದಿ ಮಾಡಿದೆ.

ಹಿಂದೂ ಧರ್ಮಕ್ಕೆ ಮರಳಿದವರನ್ನು ಇಡುವ ಘರ್ ವಾಪ್ಸಿ ಕೇಂದ್ರವೊಂದರಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿಯೊಬ್ಬಳು, ಆದಿರಾ ತೃಪ್ಪುಣಿತ್ತರ ಯೋಗ ಕೇಂದ್ರದಲ್ಲಿ ಇದ್ದಳು ಎಂಬ ಮಾಹಿತಿಯನ್ನು ಹೊರ ಹಾಕಿದ್ದಾಳೆ. ಯೋಗ ಕೇಂದ್ರದಲ್ಲಿದ್ದ 10 ಕ್ಕೂ ಅಧಿಕ ಮಂದಿಯ ತಂಡದಿಂದ ಅಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಆಕೆಯನ್ನು ಉಲ್ಲೇಖಿಸಿ ಮೀಡಿಯಾ ಒನ್ ವರದಿ ಮಾಡಿದೆ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಕಳೆದ ಜುಲೈ 10 ರಂದು ಕಾಸರಗೋಡಿನ ಉದುಮ ನಿವಾಸಿ ಆದಿರಾ ಮನೆಬಿಟ್ಟಿದ್ದಳು. ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಬಳಿಕ ಆದಿರಾಳನ್ನು ನ್ಯಾಯಾಲಯವು ಮನೆಮಂದಿಗೆ ಬಿಟ್ಟುಕೊಟ್ಟಿತ್ತು. ಇದರ ನಂತರ ಆದಿರಾಳನ್ನು ತೃಪ್ಪುಣಿತ್ತರ ಯೋಗ ಕೇಂದ್ರದಲ್ಲಿ ಇಡಲಾಗಿತ್ತು ಎಂದು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಯುವತಿ ಹೇಳಿಕೆ ನೀಡಿದ್ದಾಳೆ.

ಹಿಂದೂ ಧರ್ಮಕ್ಕೆ ಹೋಗಲು ಆದಿರಾಳಿಗೆ ಇಷ್ಟವಿರಲಿಲ್ಲ. ಬೆದರಿಕೆ ಹಾಕಿ, ದೌರ್ಜನ್ಯ ನಡೆಸಿ ಘರ್‌ ವಾಪ್ಸಿ ಮಾಡಲಾಗಿದೆ. ಗುರೂಜಿ ಎಂಬ ಮನೋಜ್‌ನ ನೇತೃತ್ವದ ತಂಡವೊಂದು ಈ ಕೃತ್ಯ ನಡೆಸುತ್ತಿದೆ. ಭಾರೀ ಬೆದರಿಕೆಯನ್ನು ಆದಿರಾಳಿಗೆ ಅಲ್ಲಿ ಎದುರಿಸಬೇಕಾಗಿ ಬಂದಿದೆ ಎಂದು ಆ ಯುವತಿ ಮೀಡಿಯಾ ಒನ್‌ಗೆ ಹೇಳಿದ್ದಾಳೆ.

https://youtu.be/qBnjEZdLsrI

Please follow and like us:
error