You are here
Home > Koppal News-1 > ದಲಿತ ಕುಟುಂಬಕ್ಕೆ ನೀರು ನಿರಾಕರಿಸಿ ಅವಮಾನಿಸಿದ ಗ್ರಾಮಸ್ಥರು : ಹೆಂಡತಿಗಾಗಿ ಬಾವಿತೋಡಿದ ಗಂಡ

ದಲಿತ ಕುಟುಂಬಕ್ಕೆ ನೀರು ನಿರಾಕರಿಸಿ ಅವಮಾನಿಸಿದ ಗ್ರಾಮಸ್ಥರು : ಹೆಂಡತಿಗಾಗಿ ಬಾವಿತೋಡಿದ ಗಂಡ

well-for-wife-dalit-mans

 

ಇದೊಂದು ಮತ್ತೊಂದು ಮೌಂಟೆನ್ ಮ್ಯಾನ್ ಮಾಂಜಿಯ ಕಥೆಯಂತಿದೆ. ಆದರೆ ಅವರಿಗೇ ಅರಿವಿಲ್ಲದಂತೆ ದಂತಕತೆಯಾಗಿದೆ. ದಿನಗೂಲಿ ನೌಕರನಾಗಿರುವ ದಲಿತ ಬಾಪುರಾವ್ ತನ್ನ ಹೆಂಡತಿಗಾಗಿ ಬಾವಿ ತೋಡಿದ ಕಥೆಯಿದು. ವಾಶಿಮ್ ಜಿಲ್ಲೆಯ Kalambeshwar ಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮದಲ್ಲಿನ ಬಾವಿಗೆ ತೆರಳಿದ ಬಾಪುರಾವ್ ನ ಹೆಂಢತಿ ಸಂಗಿತಾಳಿಗೆ ನೀರಿ ಕೊಡದೇ ಅಪಮಾನಿಸಿ ಕಳಿಸಲಾಗಿತ್ತು. ಹೆಂಡತಿಗಾದ ಅಪಮಾನವನ್ನೇ ಸವಾಲಾಗಿ ಸ್ವೀಕರಿಸಿದ ಬಾಪುರಾವ್ ಬಾವಿತೊಡಲು ಆರಂಭಿಸಿದ. ಮನೆಯವರಿರಲಿ ಸ್ವತಃ ಹೆಂಢತಿಯೂ ಮೊದಲಿಗೆ ಸಹಾಯ ಮಾಡಲಿಲ್ಲ. ತಾನು ಕೂಲಿ ಕೆಲಸ ಮಾಡಿ ಬಂದ ನಂತರ ದಿನಕ್ಕೆ 6 ಗಂಟೆಯಂತೆ ಕೆಲಸ ಮಾಡಿ ಬಾವಿ ತೋಡುವ ಕೆಲಸದಲ್ಲಿ ತೊಡಗಿದ . ಈಗಾಗಲೇ `15 ಅಡಿ ತೋಡಿದ್ದಾನೆ. ಇನ್ನೂ 5 ಅಡಿ ತೋಡಲು ನಿರ್ಧರಿಸಿದ್ದಾನೆ. ಬಾಪುರಾವ್ ನ ಶ್ರಮದ ಬಗ್ಗೆ ಅರಿತುಕೊಂಡ ಹೆಂಡತಿ ಸಂಗೀತಾ ಕ್ಷಮೆಯಾಚಿಸಿದ್ದಾಳೆ ಮತ್ತು ಸಾಥ್ ನೀಡಿದ್ಧಾಳೆ.  ನೀರು ನೀಡಲು ನಿರಾಕರಿಸಿ ದಲಿತ ಎನ್ನುವ ಕಾರಣಕ್ಕೆ ಅಪಮಾನ ಮಾಡಿದವರ ಹೆಸರು ಹೇಳಲಿಚ್ಛಿಸದ ಬಾಪುರಾವ್ ನಮ್ಮೂರಲ್ಲಿ ರಕ್ತ ಚೆಲ್ಲುವುದು ಬೇಡ ನಾವು ದಲಿತರು ಮತ್ತು ಬಡವರು ಎನ್ನುವ ಕಾರಣಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿಯೇ ನಾನೇ ಜಿದ್ದಿನಿಂದ  ಈ ಕೆಲಸದಲ್ಲಿ ತೊಡಗಿದ್ದೇನೆ. ಈ ಕಾರ್ಯದಿಂದ ಈಗಾಗಲೇ ಬಾಪುರಾವ್ ಪ್ರಸಿದ್ದಿಗೆ ಬಂದಿದ್ದಾನೆ. ನಾನಾಪಾಟೇಕರ್ ಫೋನ್ ಮಾಡಿ ಮಾತನಾಡಿದ್ದಾರೆ. ಸ್ಥಳೀಯ ಆಡಳಿತದವರೂ ಬೇಟಿ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ

janatakareporter

Leave a Reply

Top