ಪಿಯುಸಿಎಲ್ : ಜಿಲ್ಲಾಧ್ಯಕ್ಷರಾಗಿ ಪ್ರಮೋದ ತುರ್ವಿಹಾಳ ,ಪ್ರಧಾನ ಕಾರ್ಯದರ್ಶಿಯಾಗಿ ಎಚ್.ವಿ.ರಾಜಾಬಕ್ಷಿ

pramod-turvihalrajabakshi-hv
ಕೊಪ್ಪಳ : ಜನಪರ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪಿಯುಸಿಎಲ್ ನ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಕೊಪ್ಪಳದಲ್ಲಿಂದು ಮಾಡಲಾಯಿತು. ಹಿರಿಯ ಹೋರಾಟಗಾರರು, ಪಿಯುಸಿಎಲ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಯುಸಿಎಲ್ ನ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಹೋರಾಟಗಾರ,ಬರಹಗಾರ ಪ್ರಮೋದ ತುರ್ವಿಹಾಳರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ವಿ.ರಾಜಾಬಕ್ಷಿ, ಉಪಾಧ್ಯಕ್ಷರಾಗಿ ಆನಂದ ಭಂಡಾರಿ, ಸಿರಾಜ್ ಬಿಸರಳ್ಳಿ, ಸಹ ಕಾರ್ಯದರ್ಶಿಯಾಗಿ ಶಿವರಾಜ್ ದೊಡ್ಡಮನಿ , ಖಜಾಂಚಿಯಾಗಿ ಮಂಜುನಾಥ ದೊಡ್ಡಮನಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಹೆಚ್.ರಘು ಕಾಸನಕಂಡಿ,ರಘು ಬೆಲ್ಲದ, ಸಣ್ಣ ಹನುಮಂತಪ್ಪ ಹುಲಿಹೈದರ, ಸೈಯದ್ ಹಷ್ಮುದ್ದೀನ್, ರಾಮ ನರೇಂದ್ರ ಸಿಂಗ್., ಗೌರವ ಸಲಹೆಗಾರರಾಗಿ ಜೆ.ಭಾರದ್ವಾಜ, ರಾಜ್ಯ ಸಮಿತಿಯ ಸದಸ್ಯರಾಗಿ ವಿಠ್ಠಪ್ಪ ಗೋರಂಟ್ಲಿ ಹಾಗೂ ಅಲ್ಲಾಗಿರಿರಾಜ್ ರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಮುಂದಿನ ಎರಡು ವರ್ಷಗಳ ಅವಧಿಗೆ ಜಿಲ್ಲೆಯಲ್ಲಿ ಪಿಯುಸಿಎಲ್ ನ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಜನಪರ ಹೋರಾಟಗಳ ಮೂಲಕ ಜನತೆಯ ಹಕ್ಕುಗಳಿಗಾಗಿ ಎಂದಿನಂತೆ ನಿರಂತರ ಹೋರಾಟಗಳಲ್ಲಿ ತೊಡಗಿಕೊಳ್ಳಲಿದೆ.

Please follow and like us:
error