ಬಿಹಾರದ 12ನೇ ತರಗತಿಯ ಫಲಿತಾಂಶಗಳು ಹೊರಬಂದಿವೆ. ಅದರಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ ಅವರಿಗೆ ವಿಷಯಗಳ ಕುರಿತು ಜ್ಞಾನವೇ ಇಲ್ಲ ಎನ್ನುವದು ಕಂಡು ಬಂದಿದೆ. 12ನೇ ತರಗತಿಯಲ್ಲಿ ಕಲಾವಿಭಾಗದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಪೊಲಿಟಿಕಲ್ ಸೈನ್ಸ್ ಎಂಬ ಪದವನ್ನು ಉಚ್ಛಾರ ಮಾಡುವುದಕ್ಕೂ ಬರುತ್ತಿಲ್ಲ. ಅಲ್ಲದೇ ಪೊಲಿಟಿಕಲ್ ಸೈನ್ಸ್ ಎಂದರೆ ಅಡುಗೆ ಮಾಡುವದನ್ನು ಹೇಳಿಕೊಡುವ ವಿಷಯ ಎನ್ನುತ್ತಾಳೆ. ವಿಜ್ಞಾನದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಎಲೆಕ್ಟ್ರಾನ್ ಪ್ರೋಟಾನ್ ಗಳ ಬಗ್ಗೆ ಅರಿವೇ ಇಲ್ಲ. ಪರೀಕ್ಷೆಯಲ್ಲಿ ಅತೀ ಹೆಚ್ಚುನಕಲು ನಡೆದಿದ್ದು ಕಂಡು ಬಂದಿತ್ತು. ಒಟ್ಟಾರೆ ಮೌಲ್ಯಮಾಪನದ ಕುರಿತು ತನಿಖೆ ಮಾಡುವುದಾಗಿ ಸರಕಾರ ಹೇಳಿದೆ. ಪರೀಕ್ಷಾ ಅಕ್ರಮದಲ್ಲಿ ಅಧಿಕಾರಿಗಳೂ ಸಹ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.
A report by NDTV
Please follow and like us: