ಕೊಪ್ಪಳದಲ್ಲಿ ಓದಿರಿ ನಾಟಕ ಪ್ರದರ್ಶನ

odiri-drama-kannada-play
ಕೊಪ್ಪಳ : ಮುಸ್ಲಿಂ ಚಿಂತಕರ ಚಾವಡಿ,ಕನ್ನಡನೆಟ್ ಡಾಟ್ ಕಾಂ ಹಾಗೂಕವಿಸಮೂಹ ಕೊಪ್ಪಳ ಇವರ ಆಶ್ರಯದಲ್ಲಿ ಕೊಪ್ಪಳದ ನಗರದಲ್ಲಿ ಪ್ರವಾದಿ ಮಹಮ್ಮದ ಜೀವನಚರಿತ್ರೆ ಆಧಾರಿತ ಐತಿಹಾಸಿಕ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಲೇಖಕ ಬೋಳುವಾರು ಮಹ್ಮದ್ ಕುಂಇ ಯವರ ಓದಿರಿ ಕಾದಂಬರಿಯನ್ನು ಆಧರಿಸಿದ ನಾಟಕವನ್ನು ರಚಿಸಲಾಗಿದೆ. ಈಗಾಗಲೇ ರಾಜ್ಯದ ವಿವಿದೆಡೆ ಪ್ರದರ್ಶನಗೊಂಡು ಜನಮೆಚ್ಚುಗೆಯನ್ನು ಪಡೆದಿದೆ. ಪ್ರವಾದಿ ಮಹ್ಮದರ ಜೀವನಚರಿತ್ರೆ ಆಧರಿಸಿದ ಮೊದಲ ನಾಟಕ ಇದಾಗಿದ್ದು ವಿಶೇಷ ಎಂದರೆ ನಾಟಕದಲ್ಲಿ ಎಲ್ಲೂ ಸಹ ಪ್ರವಾದಿ ಮಹಮ್ಮದರನ್ನು ತೋರಿಸಲಾಗಿಲ್ಲ. ಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ)ಇವರ ಜನಮನದಾಟ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ. ದಿ.೧೧ ಗುರುವಾರದಂದು ಸಂಜೆ ೬-೩೦ಕ್ಕೆ ಸಾಹಿತ್ಯಭವನದಲ್ಲಿ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಚಿತ ಪ್ರದರ್ಶನವಿದೆ. ವಿವರಗಳಿಗೆ ಸಂಪರ್ಕಿಸಿ ರಾಜಾಬಕ್ಷಿ ಎಚ್.ವಿ. ೯೪೪೮೧೮೩೭೦೮,೯೬೨೦೨೫೪೪೮೩,೯೮೮೦೨೫೭೪೮೮

 

Odiri-play-Brochure

Please follow and like us:
error

Related posts

Leave a Comment