೬೯ನೇ ಹೈದ್ರಾಬಾದ – ಕರ್ನಾಟಕ ವಿಮೋಚನ ದಿನಾಚರಣೆ

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯ  ದಿನಾಂಕ ೧೭-೦೯-೨೦೧೬ರ ರಂದು ೬೯ನೇ ಹೈದ್ರಾಬಾದ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಪ್ರಕಾಶ ಕೆ. ಬಡಿಗೇರರವರು ದ್ವಜಾರೋಹಣವನ್ನು ನೆರವೇರಿಸುವದರ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ೩೭೧ ಜೆ ಕಲಂನ ಸಹವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಮಾಹಿತಿಯನ್ನು ಇತರರಿಗೆ ತಿಳಿಸಬೇಕು. ವಿದ್ಯಾವಂತರಾದ ನಾವು ನಮ್ಮ ಹಕ್ಕು ಮತ್ತು ಸೌಲಭ್ಯಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಪ್ರಾಧ್ಯಾಪಕರಾದ ಶ್ರೀಯುತ ವಿರೇಶ. ವಿ. ರವರು ಮಾತನಾಡಿ ಹೈದ್ರಾಬಾದ ಕರ್ನಾಟಕವು ಹಿಂದೆ ಭಾಷಾವಾರು ವಿಭಾಗಗಳಲ್ಲಿ ಹರಿದು ಹಂಚಿ ಹೋಗಿತ್ತು. ಈ ಪ್ರಾಂತ್ಯಗಳನ್ನು ಒಗ್ಗೂಡಿಸುವಲ್ಲಿ ಅತ್ಯಂತ ನಿಭೀತಿಯಿಂದ ಮತ್ತು ಮುತ್ಸದ್ದಿತನದಿಂದ ಪಾತ್ರ ವಹಿಸಿ ಹೈದ್ರಾಬಾದ ಕರ್ನಾಟಕದ ಪ್ರಾಂತ್ಯಗಳನ್ನು ಅಖಂಡ ಭಾರತದಲ್ಲಿ ಸೇರಿಸುವಲ್ಲಿ ಸರ್ದಾರ ವಲ್ಲಭಾಯಿ ಪಟೇಲರವರು ಯಶಸ್ವಿಯಾದರು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶ್ರೀ ರೇಣುಕಾನಂದ ಅಂಗಡಿ. ಜಂಬಯ್ಯ ಹಿರೇಮಠ. ಸುಭಾಸಚಂದ್ರಗೌಡ. ಕವಿತಾ ಬೆಣ್ಣಿ. ಮಲ್ಲಣ್ಣ ಕಾತರಕಿ. ದೇವರಾಜ ಹೊಸಮನಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಪ್ರಶಿಕ್ಷಣಾರ್ಥಿಯಾದ ಬಸನಗೌಡ ಹ್ಯಾಟಿ ನಿರ್ವಹಿಸಿದರು. ವಂದನಾರ್ಪಣೆಯನ್ನು ಸಿದ್ದರಾಮಪ್ಪ ಅವರು ನೆರವೇರಿಸಿವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Please follow and like us:
error