You are here
Home > Koppal News-1 > koppal news > ಹೈನುಗಾರಿಕೆ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಹೈನುಗಾರಿಕೆ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಭವಿಷ್ಯದಲ್ಲಿ ಹೈನುಗಾರಿಗೆ ಹೆಚ್ಚಿನ ಬೇಡಿಕೆ
ಕೊಪ್ಪಳ: ಆಧುನಿಕ ತಂತ್ರಜ್ಞಾನದಿಂದ ಈಗೀನ ದಿನಮಾನಗಳಲ್ಲಿ ಹೈನುಗಾರಿಕೆಗೆ ಬೇಡಿಕೆ ಹೆಚ್ಚಾಗಿದ್ದು ಅನ್ನದಾತನ ಸಂಕಷ್ಟಗಳು ಬಗೆಹರಿಯಲಿವೆ ಎಂದು ರಾ.ಬ.ಕೋ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಹೇಳಿದರು. ಅವರು ಮಂಗಳವಾರದಂದು ಮಾದಿನೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹಾಲು ಉತ್ಪಾದಕ ಸಂಘದ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಲಾಭದಾಯಕ ವಾಗಲಾರದು. ಭಾರತ ದೇಶವು ವಾರ್ಷಿಕ ೧೦೪ ಮಿಲಿಎನ್ ಮೆಟರಿಕ್ ಟನ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವುದು ಇದು ನಮ್ಮ ದೇಶದ ರೈತರಿಗೆ ಸಲ್ಲಬೇಕಾದ ಅಭಿನಂದನೆಯಾಗಿದೆ. ಆದಾಗ್ಯೂ ನಮ್ಮ ಜಿಲ್ಲೆಯಲ್ಲಿ ಹಾಲಿನ ಲಭ್ಯತೆ ಕಡಿಮೆಯಾಗಿರುವುದರಿಂದ ಹಚ್ಚು ಹಾಲು ಉತ್ಪಾದನೆ ಯಾಗುತ್ತಿರುವ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ರಚನೆಮಾಡಿ ರೈತರಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರ್ರಾದೇಸಿಕ ನಿರ್ದೇಶಕರಾದ ಕೆ. ಬೂದಪ್ಪ ಗೌಡ ಮಾತನಾಡಿ, ಕೃಷಿ ಮತ್ತು ಹೈನುಗಾರಿಕೆ ಇಲ್ಲದೇ ಅನ್ನವಿಲ್ಲ.  ರೈತರು ಮಾರುಕಟ್ಟೆ ಅವಲೋಕಿಸಿ ಸೂಕ್ತ ಹೈನುಗಾರಿಕೆ ಮಾಡಿದರೆ  ಆದಾಯ ಗಳಿಸಬಹುದು. ಧರ್ಮಸ್ಥಳ ಸಂಸ್ಥೆ ಹೈನುಗಾರಿಕೆ ಆರಂಭಿಸಲು ತರಬೇತಿ ನೀಡಿ ಪ್ರತಿ ಹೈನುಗಾರರನ್ನು ಸಂಘಟಿಸಿ ಯುನಿಯನ್ ಬ್ಯಾಂಕ್ ಮೂಲಕ ಆರ್ಥಿಕ ಸೌಲಭ್ಯ ನೀಡುತ್ತಿದೆ ಎಂದರು????????????????????????????????????

. ಸಂಪನ್ಮೂಲ ವ್ಯಕ್ತಿ ಡಾ. ಶಿವರಾಜ ಎಮ್. ಶೆಟ್ಟರ ಮಾತನಾಡಿ, ಮಿಶ್ರತಳಿ ಹಸುಗಳ ಆಯ್ಕೆ ಮತ್ತು ಆಯ್ಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಆರೋಗ್ಯವಂತ ರಾಸುವಿನ ಲಕ್ಷಣಗಳು, ಗರ್ಭದ ರಾಸುಗಳ ನಿವಹಣೆ, ಕರುಗಳ ಪಾಲನೆ ಪೋಷಣೆ ಬಗ್ಗೆ, ಸಮತೋಲನ ಪಶು ಆಹಾರ, ಹಾಲು ಉತ್ಪಾದನೆಯಲ್ಲಿ ಹಸಿರು ಮೇವಿನ ಮಹತ್ವ ಜಾನುವಾರಗಳ ಕೃತಕ ಗರ್ಭದಾರಣೆ, ಗುಣಮಟ್ಟದ ಹಾಲು ಉತ್ಪಾದನೆ, ಜಾನುವಾರುಗಳಿಗೆ ಭದ್ರತೆಯ ಅನುಗುಣವಾಗಿ ವಿಮೆ ಮಾಡಿಸುವಬಗ್ಗೆ ಮಾಹಿತಿ ತಿಳಿಸಿದರು.

Leave a Reply

Top