ಹಿಂದೂ ಧರ್ಮವು ಸಂಸ್ಕೃತಿ-ಧಾರ್ಮಿಕಕ್ಕೆ ಸಮ್ಮಿಲನ- ಸಂಗಣ್ಣ ಕರಡಿ

 ಕೊಪ್ಪಳ ನಗರದ  ಶ್ರೀ ಸಿದ್ಧಿ ವಿನಾಯಕ ಮಿತ್ರಮಂಡಳಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ಸಂಗಣ್ಣ ಕರಡಿಯವರು ಮಾತನಾಡಿ ದೇಶದ ಇತಿಹಾಸದ ಬಗ್ಗೆ ಮೆಲುಕು ಹಾಕಿ ಬಾಲಗಂಗಾಧರ ತಿಲಕರು ಗಣೇಶ ಪ್ರತಿಷ್ಠಾಪನೆಯನ್ನು ಸಾರ್ವಜನಿಕಗೊಳಿಸಿ ಧಾರ್ಮಿಕ ಕಾರ್ಯಕ್ರಮವನ್ನು ಸಾರ್ವತ್ರಿತಗೊಳಿಸಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ಅದು ಹಾಗೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈ ಸಾಧಕರ ಕುರಿತು ಒಬ್ಬರಾದ ಶ್ರೀ ಕುಮಾರ ಗಂಗಾಧರ್ ಬಂಡಾನವರ್ ಅವರು ವರ್ಣ ಚಿತ್ರಕಲೆಯಲ್ಲಿ ತನ್ನದೇಯಾದ ಸಾಧನೆ ಮಾಡಿದ್ದಾರೆ. ಈತನಿಗೆ ಹಲವಾಗು ರಾಜ್ಯ & ರಾಷ್ಟ್ರ ಪ್ರಶಸ್ತಿಗಳು ದೊರಕಿವೆ. ಅದರಲ್ಲಿ ಒಂದಾದ ದಕ್ಷಿಣ ಭಾರತ ವರ್ಣಚಿತ್ರಕಲಾ ಕ್ಷೇತ್ರದಲ್ಲಿ ದೇಶಕ್ಕೆ ೮ನೇ ರ್‍ಯಾಂಕ್‌ನ್ನು ಪಡೆದುಕೊಂಡು ಕೊಪ್ಪಳಕ್ಕೆ ಕೀರ್ತಿ ತಂದ ಗೌರವ ಈತನಿಗೆ ಸಲ್ಲುತ್ತದೆ ಅದೇ ರೀತಿ ಹಿಂದೂ ಧರ್ಮವು ವಿಶಿಷ್ಠ ಸಂಸ್ಕೃತಿ-ಧಾರ್ಮಿಕ ಆಚರಣೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾ.ಜ.ಪ. ಮುಖಂಡರಾದ ಸಿ.ವಿ. ಚಂದ್ರಶೇಖರರವರು ಮಾತನಾಡಿ ಯುವಕರು ನಮ್ಮ ದೇಶದ ಧಾರ್ಮಿಕ ಆಚರಣೆಯನ್ನು ಶ್ರದ್ಧಾಪೂರ್ವಕವಾಗಿ ನಡೆಸಿಕೊಂಡು ಬರುತ್ತಿರುವುದು ಅದರಲ್ಲಿಯೂ ದಶಮಾನೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಎಲ್ಲಾ ಯುವಕರಿಗೆ ಅಭಿನಂದನೆ ಸಲ್ಲಿಸಿದರು.  ಮುಖ್ಯ ಅತಿಥಿಯಾಗಿ ಆಗಮಿಸಿದ ನಗರ ವೃತ್ತ ನಿರೀಕ್ಷಕರಾದ ಶ್ರೀ ಸತೀಶ ಪಾಟೀಲರವರು ಮಾತನಾಡಿ ದೇಶದ ಕಾನೂನು ಸೂವ್ಯವಸ್ಥೆಯನ್ನು ಪಾಲಿಸಿ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಆಧನೆಗೈದ ಮಹನಿಯರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಬಸವರೆಡ್ಡಿ ಶಿವನಗೌಡ್ರ, ಅಪ್ಪಣ್ಣ ಪದಕಿ ನಗರಸಭಾ ಸದಸ್ಯರು, ಸಿ.ವಿ.ಚಂದ್ರಶೇಖರ ಬಜಪ ಮುಖಂಡರು, ಅರುಣ್ ಅಪ್ಪು ಶೆಟ್ಟಿ ಯುವ ಮುಖಂಡರು ಮಾಜಿ ಎನ್.ಎಸ್.ಯು.ಐ. ಅಧ್ಯಕ್ಷರು, ಚನ್ನಪ್ಪ ಕೊಡ್ದಾಳ ನಗರಸಭಾ ಸದಸ್ಯರು, ಈರಣ್ಣ ಬಂದಾನವರ ಮಾಜಿ ನಾ.ನಿ.ನಗರಸಭಾ ಸದಸ್ಯರು, ಹನುಮಂತಪ್ಪ ಬೀಡನಾಳ (ಜಲವರ್ಧಿನಿ), ಹಾಲೇಶ ಕಂದಾರಿ, ಶರಣಪ್ಪ ಚಂದನಕಟ್ಟಿ ನಗರಸಭಾ ಸದಸ್ಯರು, ಮೀನಾಕ್ಷಿ ಬನ್ನಿಕೊಪ್ಪ, ಮಲ್ಲಪ್ಪ ಸಜ್ಜನ, ಶ್ರೀಶೈಲಪ್ಪ ದಿವಟರ್, ವೆಂಕಟೇಶ ಮತ್ತಿತರರು ಪಾಲ್ಗೊಂಡಿದ್ದರು.

Please follow and like us:
error