ಕೊಪ್ಪಳ ನಗರದ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈದರಾಬಾದ – ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರಾಷ್ಟ್ರ ಧ್ವಜವನ್ನು ಕೊಪ್ಪಳ ಲಯನ್ಸ್ ಕ್ಲಬ್ನ ಸದಸ್ಯರಾದ ಲ. ಪಿ.ಕೆ. ವರದರವರು ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕ ಮಾರುತಿ ಚಾಮಲಾಪೂರರವರು ಹೈದರಾಬಾದ – ಕರ್ನಾಟಕ ವಿಮೋಚನಾ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲ. ಶ್ರೀನಿವಾಸ ಗುಪ್ತಾ, ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಲ. ವಿರುಪಾಕ್ಷಪ್ಪ ಅಗಡಿ, ಕಾರ್ಯದರ್ಶಿಗಳಾದ ಲ. ಬಸವರಾಜ ಬಳ್ಳೊಳ್ಳಿ ಹಾಗೂ ಸದಸ್ಯರಾದ ಲ. ಪರಮೇಶ್ವರಪ್ಪ ಕೊಪ್ಪಳ, ಲ. ಜವಾಹರಲಾಲ ಜೈನ್, ಲ. ಮಹೇಶ ಮಿಟ್ಟಲಕೋಡ್, ಲ. ಅರವಿಂದ ಅಗಡಿ, ಲ. ಪ್ರಭು ಹೆಬ್ಬಾಳ, ಲ. ಸುರೇಶ ಸಂಚೇಟಿ, ಲ. ವಿರೇಶ ಹತ್ತಿ, ಲ. ಶಾಂತಣ್ಣ ಮುದಗಲ್, ಲ. ನಂದಕಿಶೋರ ಸುರಾಣಾ ಮತ್ತು ಶಾಲಾ ಪ್ರಾಚಾರ್ಯರಾದ ಶ್ರೀಮತಿ ಪದ್ಮಜಾ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಪಾಲ್ಗೋಂಡಿದ್ದರು.
ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹೈದರಾಬಾದ – ಕರ್ನಾಟಕ ವಿಮೋಚನಾ ದಿನಾಚರಣೆ
Please follow and like us: