You are here
Home > Koppal News-1 > koppal news > ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾತಂತ್ರೋತ್ಸವದ ದಿನಾಚರಣೆಯ ಸಂಭ್ರಮಾಚರಣೆ

ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾತಂತ್ರೋತ್ಸವದ ದಿನಾಚರಣೆಯ ಸಂಭ್ರಮಾಚರಣೆ

ಕೊಪ್ಪಳ – ನಗರದ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವತಂತ್ರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರಾಷ್ಟ್ರ ಧ್ವಜವನ್ನು ಕೊಪ್ಪಳ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲ. ಶ್ರೀನಿವಾಸ ಗುಪ್ತಾರವರು ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕಲಿತಿರುವ (ಹಳೆಯ) ವಿದ್ಯಾರ್ಥಿಗಳಾದ ಶ್ರೀ ಶರಣು ಮುದಗಲ್, ಶ್ರೀ ಗೋವಿಂದರಾಜು ಕುಲಕರ್ಣಿ, ಡಾ|| ದೀಪು ಪಾಟೀಲ, ಡಾ|| ಉಮೇಶ ರಾಜೂರು, ಶ್ರೀ ಚಂದ್ರಶೇಖರ, ಶ್ರೀ ಸಚಿನ್ ಮೆಹತಾ ಹಾಗೂ ಸಚಿನ್ ಹಿರೇಮಠ ಇವರುಗಳಿಗೆ ಕೊಪ್ಪಳ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲ. ಶ್ರೀನಿವಾಸ ಗುಪ್ತಾ, ನಮ್ಮ ಶಾಲೆಯ ಆಡಳಿತ ಮಂಡಳೀಯ ಅಧ್ಯಕ್ಷರಾದ ಲ. ವಿರುಪಾಕ್ಷಪ್ಪ ಅಗಡಿ, ಕಾರ್ಯದರ್ಶಿಗಳಾದ ಲ. ಬಸವರಾಜ ಬಳ್ಳೊಳ್ಳಿ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳೀಯ ಸದಸ್ಯರಾದ ಲ. ಪರಮೇಶ್ವರಪ್ಪ ಕೊಪ್ಪಳ, ಲ. ಜವಾಹರಲಾಲ ಜೈನ್, ಲ. ಮಹೇಶ ಮಿಟ್ಟಲಕೋಡ್, ಲ. ಅರವಿಂದ ಅಗಡಿ, ಲ. ಪ್ರಭು ಹೆಬ್ಬಾಳ, ಲ. ಸುರೇಶ ಸಂಚೇಟಿ, ಲ. ವಿರೇಶ ಹತ್ತಿ, ಲ. ಶಾಂತಣ್ಣ ಮುದಗಲ್, ಲ. ನಂದಕಿಶೋರ ಸುರಾಣಾ ಮತ್ತು ಶಾಲಾ ಪ್ರಾಚಾರ್ಯರಾದ ಶ್ರೀಮತಿ ಪದ್ಮಜಾ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಪಾಲ್ಗೋಂಡಿದ್ದರು.
swamy

Leave a Reply

Top