ಸ್ನಾತಕೋತ್ತರ ಪದವಿ ತರಗತಿಗಳ ಉದ್ಘಾಟನೆ

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ ೧೭.೦೯.೨೦೧೬, ಶನಿವಾರದಂದು ಬೆಳಿಗಿನ ೧೦:೩೦ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಎಂ.ಎಸ್ಸಿ (ಭೌತಶಾಸ್ತ್ರ), ಎಂ.ಎ (ಇಂಗ್ಲೀಷ) ಮತ್ತು ಎಂ.ಕಾಂ ಸ್ನಾತಕ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ|| ಭೀಮನಗೌಡ ಮತ್ತು ಅದೇ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ಚೇರಮನ್ ಮತ್ತು ಡೀನ್ ಆಗಿರುವ ಡಾ|| ಎನ್. ಶಾಂತ ನಾಯಕರವರು ಆಗಮಿಸಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಡಾ|| ಶಾಂತ ನಾಯಕರವರು ತಮ್ಮ ವಿದ್ಯಾರ್ಥಿ ಜೀವನದಲ್ಲಾದ ಕೆಲವು ಅನುಭವಗಳನ್ನು ಮೆಲಕು ಹಾಕುತ್ತ, ಸ್ನಾತಕೋತ್ತರ ಅವಧಿಯಲ್ಲಿ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಉನ್ನತ ಗುರಿಗಳನ್ನಿಟ್ಟುಕೊಂಡು ಜೀವನದಲ್ಲಿ ಗುರಿ ಸಾಧಿಸಬೇಕು ಎಂಬುದಾಗಿ ತಿಳಿಹೇಳಿ ವಿದ್ಯಾರ್ಥಿಗಳ ಭಾವಿ ಜೀವನವು ಉಜ್ವಲವಾಗಲೆಂದು ಹಾರೈಸಿದರು. ಅದಾದ ನಂತರ ಡಾ|| ಭೀಮನಗೌಡರವರು ಮಾತನಾಡುತ್ತ ತಾನೊಬ್ಬ ಹಿರಿಯ ವಿದ್ಯಾರ್ಥಿ ಎಂದು ಪರಿಗಣಿಸಲು ವಿದ್ಯಾರ್ಥಿಗಳಿಗೆ ಸೂಚಿಸಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಶ್ರೀ.ಗ.ವಿ.ವ.ಟ್ರಸ್ಟ್’ನ ಕಾರ್ಯದರ್ಶಿ ಶ್ರೀ ಎಸ್.ಮಲ್ಲಿಕಾರ್ಜುನ ,ಪ್ರಾಚಾರ್ಯರಾದ ಎಂ.ಎಸ್.ದಾದ್ಮಿ, ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಕೆ.ರಾಘವೇಂದ್ರ, ಶ್ರೀ ಸಿ.ವಿ.ಕಲ್ಮಠ ಮತ್ತು ಇತರ ಪ್ರಾಧ್ಯಾಪಕ ಮಿತ್ರರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಶ್ರೀ ಎಸ್.ಬಿ.ಹಿರೇಮಠರವರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ನಂತರದಲ್ಲಿ ಅತಿಥಿಗಳ ಪರಿಚಯವನ್ನು ಪ್ರಾಧ್ಯಾಪಕ ಅರುಣ ಕರಮರಕರ್ ನಿರ್ವಹಿಸಿದರು. ಕಾರ್ಯಕ್ರಮವಯ ಎಂ.ಕಾಂ ವಿದ್ಯಾರ್ಥಿನಿ ನಿಂಗಮ್ಮ ಇವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ಇಂಗ್ಲೀಷ ಪ್ರಾಧ್ಯಾಪಕರಾದ ಆದೇಶರವರ ವಂದನಾರ್ಪಣೆಯ ಮೂಲಕ ಮುಕ್ತಾಯವಾಯಿತು. ಕಾರ್ಯಕ್ರಮದ ನಂತರ ಇಬ್ಬರೂ ಮುಖ್ಯ ಅತಿಥಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಷಯವಾರು ಉಪನ್ಯಾಸ ನೀಡಿದರು

Please follow and like us:
error