ಸೈಕಲ್ ವಿತರಣಾ ಕಾರ್ಯಕ್ರಮ

 ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅಂಗಡಿಯವರು ವಹಿಸಿಕೊಂಡು ಮಾತನಾಡಿದ ಅವರು ಸರಕಾರವು ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ಯೋಜನೆಗಳ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಗವಿಸಿದ್ದಪ್ಪ ಹಿಟ್ನಾಳರವರು ವಹಿಸಿಕೊಂಡಿದ್ದರು. ಸದರಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯರಾದ ಶ್ರೀ. ಎಸ್.ಎಸ್. ಗುರುವಿನ್ ಹಾಗೂ ನಿರ್ದೇಶಕರುಗಳಾದ ಶ್ರೀ ಹನುಮೇಶ ಮುರಡಿ, ಶ್ರೀ ಅಮರೇಶ ಉಪಲಾಪುರ, ಶ್ರೀ ಸೋಮಣ್ಣ ಬೈರಣ್ಣನವರು (ಉಪಾಧ್ಯಕ್ಷರು), ಶ್ರೀ ವಿರುಪಾಕ್ಷಗೌಡ್ರ ಹಿರೇಗೌಡ್ರ, ಶ್ರೀ ಭರಮಪ್ಪ ಹಟ್ಟಿ (ಜಿ.ಪಂ.ಸದಸ್ಯರು), ಶ್ರೀ ಬಸವರಾಜ ಭಾವಿಕಟ್ಟಿ, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply