ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಕೊಪ್ಪಳ-ಮುದ್ಲಾಪುರ ಗ್ರಾಮದ ಎಸ್ಸಿ, ಎಸ್ಟಿ ಹಾಗೂ ಎಲ್ಲ ವರ್ಗದವರಲ್ಲಿ ವಸತಿ ಮನೆಗಳ ಅವಶ್ಯಕತೆ ಇರುವವರು ಪಟ್ಟಿ ನೀಡಿದರೆ ರಾಜೀವಗಾಂಧಿ ವಸತಿ ನಿಗಮ ಮೂಲಕ ಗುಂಪು ಮನೆಗಳ ಮಂಜೂರಾತಿ ಮಾಡಿಸಲಾಗುವುದು ಎಂದು ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು.

ಅವರು ಬುಧವಾರ ಹಿರೇಹಳ್ಳ ಆಣೆಕಟ್ಟೆ ಮುಂಭಾಗದಲ್ಲಿ ೯ ಕೋಟಿ ೫೦ ಲಕ್ಷ ವೆಚ್ಚದ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.ಹಿರೇಹಳ್ಳ ಜಲಾಶಯ ಉದ್ಘಾಟನೆಯಾದ ದಿನದಿಂದ ಕಿನ್ನಾಳ-ಮುದ್ಲಾಪುರ ಸೇರಿದಂತೆ ಅನೇಕ ಗ್ರಾಮಸ್ಥರ ಒಂದೂವರೆ ದಶಕದ ಬೇಡಿಕೆಯಾಗಿದ್ದ ಹಿರೇಹಳ್ಳಕ್ಕೆ ಮೇಲ್ಮಟ್ಟದ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಮಳೆಗಾಲದಲ್ಲಿ ಜನರಿಗೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಸ್ಥಗಿತಗೊಂಡಿರುವ ಹಿರೇಹಳ್ಳ ಏತ ನೀರಾವರಿ ಯೋಜನೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾರ್ಯಗತಗೊಳಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಗವಿಶಿದ್ದಪ್ಪ ಕರಡಿ ಮಾತನಾಡಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಗಾಗಿ ಸಕಲ ಸಹಕಾರ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಮರಿಯಪ್ಪ ಹರಿಜನ, ಮುಖಂಡರಾದ ಬಸವರಾಜ ಚಿಲವಾಡಗಿ, ಬಾಷಾ ಹಿರೇಮನಿ,ವಿರೇಶ ತಾವರಗೇರಿ, ಅನಿಲ್ ಬೋರಟ್ಟಿ, ಅಶೋಕ ಚಿತ್ರಗಾರ, ಸುಭಾನ್‌ಸಾಬ ಹೀರಾಳ, ಡಾ. ನರಸಿಂಹರಾವ್ ಗಂಗಾಖೇಡ, ದಲಿತ ಮುಖಂಡ ಯಲ್ಲಪ್ಪ, ಎಸ್.ಬಿ.ಖಾದ್ರಿ ಉಪಸ್ಥಿತರಿದ್ದರು. k

Leave a Reply