Breaking News
Home / Koppal News-1 / koppal news / ಸಾಮೂಹಿಕ ಮದುವೆಗಳಿಂದ ದುಂದುವೆಚ್ಚಕ್ಕೆ ಕಡಿವಾಣ:ಶಾಸಕ ರಾಘವೇಂದ್ರ ಹಿಟ್ನಾಳ
ಸಾಮೂಹಿಕ ಮದುವೆಗಳಿಂದ ದುಂದುವೆಚ್ಚಕ್ಕೆ ಕಡಿವಾಣ:ಶಾಸಕ ರಾಘವೇಂದ್ರ ಹಿಟ್ನಾಳ

ಸಾಮೂಹಿಕ ಮದುವೆಗಳಿಂದ ದುಂದುವೆಚ್ಚಕ್ಕೆ ಕಡಿವಾಣ:ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ ನಗರದ ಸರ್ದಾರ ಓಣಿ ಪಂಚ ಕಮಿಟಿವತಿಯಿಂದ ಗ್ಯಾರವಿ ಹಬ್ಬದ ನಿಮಿತ್ಯ ಏರ್ಪಡಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಪ್ರತಿಯೊಬ್ಬ ಸಮಾಜದವರು ಸಾಮೂಹಿಕ ವಿವಾಹಗಳಿಗೆ ಇಂದು ಹೆಚ್ಚು ಒತ್ತು ಕೊಡುವುದರಿಂದ ಮದುವೆ ಸಮಾರಂಭದಲ್ಲಿ ಉಂಟಾಗುವ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿ ಇದರಿಂದ ಬಡವರಿಗೆ ಆಗುವ ತೊಂದರೆಗಳನ್ನು ನಿವಾರಣೆ ಮಾಡಬಹುದು. ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ಶಾದಿ ಭಾಗ್ಯದ ಯೋಜನೆಯಡಿಯಲ್ಲಿ ರೂ.೫೦,೦೦೦/- ಧನಸಹಾಯ ನೀಡುತ್ತಿದ್ದು ಇದರಿಂದ ಸಮಾಜದ ಬಡ ಮುಸಲ್ಮಾನ ಬಾಂಧವರಿಗೆ ಹೆಚ್ಚು ಅನುಕೂಲವಾಗಿದೆ. ಸಾಮೂಹಿಕ ವಿವಾಹಗಳು ನೆರವೇರಿಸುವುದರಿಂದ ಬಡ ಹೆಣ್ಣು ಮಕ್ಕಳ ಕಲ್ಯಾಣವು ಸುಗಮವಾಗಿ ನೆರವೇರಿ ಅವರ ಕುಟುಂಬದ ನಿರ್ವಹಣೆಗೆ ಸಮಾಜ ಕೊಡುವ ಕೊಡುಗೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ. ಸದಸ್ಯ ಜಡಿಯಪ್ಪ ಬಂಗಾಳಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಸಮಾಜದ ಮುಖಂಡರುಗಳಾದ ಅಮ್ಜದ್ ಪಟೇಲ್, ಕಾಟನ್ ಪಾಷಾ, ಗೌಸ ಸರ್ದಾರ, ಶಹಾಬುದ್ದಿನ, ಮಾನ್ವಿ ಪಾಷಾ, ಹುಸೇನಪೀರಾ ಚಿಕನ್, ಮುಸ್ತಫಾ ಕುದರಿಮೋತಿ, ವೀರೇಶ ಮಹಾಂತಯ್ಯನಮಠ, ಜಾಫರ್ ತಟ್ಟಿ, ಅಜೀಮ್ ಗ್ಯಾಸವಾಲೆ, ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

About admin

Leave a Reply

Scroll To Top