You are here
Home > Koppal News-1 > koppal news > ಸರ್ವೊಚ್ಛ ನ್ಯಾಯಾಲಯದ ತೀರ್ಪು ಖಂಡಿಸಿ ಒನಕೆ ಚಳುವಳಿ

ಸರ್ವೊಚ್ಛ ನ್ಯಾಯಾಲಯದ ತೀರ್ಪು ಖಂಡಿಸಿ ಒನಕೆ ಚಳುವಳಿ

ಕೊಪ್ಪಳ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೊಚ್ಛ ನ್ಯಾಯಾಲಯದ ತೀರ್ಪು ಕರ್ನಾಟಕದ ಕನ್ನಡಿಗರ ಪಾಲಿಗೆ ಮರಣ ಶಾಸನ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ, ಆಘಾತವಾಗುತ್ತಿದ್ದು ತಮಿಳುನಾಡು ಮುಖ್ಯಮಂತ್ರಿ ಜಲರಾಕ್ಷಿಸಿ ಜಯಲಲೀತಾಳ ಲಾಬಿಗೆ ಮಣಿದು ಸರ್ವೊಚ್ಛ ನ್ಯಾಯಾಲಯ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದ ಖಂಡನಿಯ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ಕೂಡಲೆ ಪ್ರಧಾನಿಗಳಾದ ನರೇಂದ್ರ ಮೊದಿಯವರು ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗದಂತೆ ಸಮಸ್ಯೆಯನ್ನು ಬಗೆ ಹರಿಸಬೇಕು. ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಲ್ಲಾ ಶಾಸಕರುಗಳು ಈ ಕೂಡಲೆ ರಾಜಿನಾಮೆ ನೀಡಿ ನಮ್ಮೊಂದಿಗೆ ಹೋರಾಟಕ್ಕೆ ಇಳಿಯಬೇಕು. ಹಾಗೂ ರಾಜ್ಯದ ಎಲ್ಲಾ ಸಂಸದರು ರಾಜಿನಾಮೆ ನೀಡಿ ಪ್ರಧಾನ ಮಂತ್ರಿಯವರಿಗೆ ಮಧ್ಯವಸ್ಥಿಕೆ ವಹಿಸುವಂತೆ ಒತ್ತಡ ಹೇರಬೇಕೆಂದು ಕನಸೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹಾಗೂ ಎಲ್ಲಾ ಶಾಸಕರುಗಳಿಗೆ ರಾಜಿನಾಮೆ ನೀಡುವಂತೆ ಒನಕೆ ಏಟು ನೀಡುವುದರ ಮೂಲಕ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಕೂಡಲೆ ಮಧ್ಯಸ್ಥಿಕೆ ವಹಿಸುವಂತೆ ಒನಕೆ ಏಟು ಕೊಡುವುದರ ಮೂಲಕ ಹಾಗೂ ಜಲರಾಕ್ಷಿಸಿ ಜಯಲಲಿತಾಳ ಮೇಲೆ ಚಿಕ್ಕ ಮಕ್ಕಳ ಮೂಲಕ ಸುಸು ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು ಎಂದು ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಶಾಮ್ ಮೂರ್ತಿ ಹಂಚಿ, ಖಾಜಮ್ಮ ರಾಯಚೂರು, ವಿರೇಶ ಕಟ್ಟಿ, ಮರಿಯಪ್ಪ ಮಂಗಳೂರು, ಉಮೇಶಪ್ಪ ಮಾಳಗಿ, ಖಾಜಾವಲಿ, ಪುಟ್ಟು ಗಿಣಗೇರಿ, ರವಿ ಗದ್ದಿ, ಸಿದ್ದು ಕುಂಡಗೌಡ್ರ, ಸಂಗಣ್ಣ ಮೇಟಿ, ಕನಕಪ್ಪ ಗುಳಾರಿ, ಶೆಶಣ್ಣ ಶಹಪೂರ, ಬಸೀರಹಮ್ಮದ, ಸಿದ್ದಪ್ಪ ಬಾರಕೇರ, ಆನಂದ ಮಡಿವಾಳರ, ಮಾರುತಿ ಕ್ವಾಟಿ, ರವಿ ಪಾಟೀಲ.

????????????????????????????????????

Leave a Reply

Top