ಸರ್ವೆ ಕಾರ್ಯದಲ್ಲಿ ಅನಗತ್ಯ ವಿಳಂಬ ಸಲ್ಲದು- ಜಿಲ್ಲಾಧಿಕಾರಿ ಎಂ. ಕನಗವಲ್ಲಿ

ಕೊಪ್ಪಳ-  ಸರ್ವೆ ಕಾರ್ಯಗಳಿಗೆ ಸಂಬಂಧಿಸಿದಂತೆ ರೈತರಿಗೆ ತಪ್ಪು ಮಾಹಿತಿ ನೀಡಿ, ಅನಗತ್ಯವಾಗಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸದೆ, ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸರ್ಕಾರಿ ಭೂಮಾಪಕರು ಹಾಗೂ ಪರವಾನಗಿ ಭೂಮಾಪಕರಿಗೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಗಂಗಾವತಿಯ ಸರ್ಕ್ಯೂಟ್ ಹೌಸ್‌ನಲ್ಲಿ ಭೂದಾಖಲೆಗಳ ಅಧಿಕಾರಿಗಳು, ತಹಸಿಲ್ದಾರರು ಹಾಗೂ ಅಧೀನ ಸಿಬ್ಬಂದಿಯ ವರೊಂದಿಗೆ ಬುಧವಾರದಂದು ಕೈಗೊಂಡ ಪೋಡಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂಮಾಪಕರು ರೈತರಿಗೆ ತೊಂದರೆ ಕೊಡದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ರೈತರಿಗೆ ತಪ್ಪು ಮಾಹಿತಿ ನೀಡಿ, ವಿನಾ ಕಾರಣ ವಿಳಂಬ ಮಾಡದೆ ಕಾನೂನು ಹಾಗೂ ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ಮೋಜಣಿ ತಂತ್ರಾಂಶದಲ್ಲಿ ಬಾಕಿ ಇರುವ ಕಡತಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಬೇಕು. ತಹಸಿಲ್ದಾರರು ಮೋಜಿಣಿ ತಂತ್ರಾಂಶದಲ್ಲಿ ಬಾಕಿ ಇರುವ ತಿದ್ದುಪಡಿ ಕಡತಗಳನ್ನು ಒಂದು ವಾರದೊಳಗಾಗಿ ತಿದ್ದುಪಡಿ ಮಾಡಬೇಕು. ಗಂಗಾವತಿ ತಾಲೂಕಿನಲ್ಲಿ ಮೋಜಿಣಿ ತಂತ್ರಾಂಶದಲ್ಲಿ ರೀ ಡಾಟಾ ಎಂಟ್ರಿಗೆ ಇರುವ ೫೩ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪರ್ಯಾವೇಕ್ಷಕರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.ಭೂದಾಖಲೆಗಳ ಉಪನಿರ್ದೇಶಕರ ಲಾಗಿನ್‌ನಲ್ಲಿ ಮೋಜಿಣಿ ತಂತ್ರಾಂಶದಲ್ಲಿ ಇರುವ ೪೪ ಪ್ರಕರಣಗಳನ್ನು ಖುದ್ದಾಗಿ ತಾಲೂಕಿಗೆ ಹಾಜರಾಗಿ ವಿಲೇವಾರಿ (ಹಿಸ್ಸಾ ರದ್ದು ಪ್ರಕರಣ) ಮಾಡಬೇಕು. ೩೦ ತಕರಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂದಾಖಲೆಗಳ ಉಪನಿರ್ದೇಶಕರು ಹಾಗೂ ೩೫ ತಕರಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಸಿಲ್ದಾರರು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು ಅಗತ್ಯ ಕ್ರಮ ವಹಿಸಬೇಕು. ಮೋಜಿಣಿಯಲ್ಲಿರುವ ತಕರಾರು ಪ್ರಕರಣಗಳನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಿ ವರದಿ ಸಲ್ಲಿಸಬೇಕು. ಪಹಣಿ ತಿದ್ದುಪಡಿ ಪ್ರಕರಣಗಳ ವರದಿಯನ್ನು ಸಂಬಂಧಿಸಿದ ಶಿರಸ್ತೆದಾರರು ಪ್ರತಿ ದಿನ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಕಂದಾಯ ಮತ್ತು ಭೂಮಾಪನ ಶಾಖೆಯು ಅತ್ಯಂತ ಮಹತ್ವದ ಇಲಾಖೆಯಾಗಿದ್ದು, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಜವಾಬ್ದಾರಿಯನ್ನರಿತು, ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿ, ಸಿಬ್ಬಂದಿಗಳಿಗೆ ತಾಕೀತು ಮಾಡಿದರು.dcಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕ ರವಿಕುಮಾರ್, ತಹಸಿಲ್ದಾರ್ ಚಂದ್ರಕಾಂತ ಮಾಲಗಿತ್ತಿ ಸೇರಿದಂತೆ ಭೂದಾಖಲೆ ಮತ್ತು ಕಂದಾಯ ವಿಭಾಗದ ಅಧಿಕಾರಿಗಳು, ಶಿರಸ್ತೆದಾರರು, ಸರ್ವೆಯರ್‌ಗಳು ಪಾಲ್ಗೊಂಡಿದ್ದರು.

Please follow and like us:
error