You are here
Home > Koppal News-1 > koppal news > ಸರಕಾರಿ ಶಾಲೆ ಸರದಾರಗಲ್ಲಿ ಹೈದರಾಬಾದ್-ಕರ್ನಾಟಕ ದಿನಾಚಾರಣೆ

ಸರಕಾರಿ ಶಾಲೆ ಸರದಾರಗಲ್ಲಿ ಹೈದರಾಬಾದ್-ಕರ್ನಾಟಕ ದಿನಾಚಾರಣೆ

ಕೊಪ್ಪಳ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರದಾರಗಲ್ಲಿಯಲ್ಲಿ ಕೊಪ್ಪಳ ಹಾಗೂ ಮಹಿಳಾ ಪದವಿ ಕಾಲೇಜು ಜೊತೆಗೂಡಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚಾರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮುಖ್ಯೋಪಾದ್ಯಾಯರಾದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿಯವರು ಧ್ವಜಾರೋಹಣ ನೆರೆವೇರಿಸಿದರು ಈ ಕಾರ್ಯಕ್ರಮದಲ್ಲಿ ಪದವಿ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರಭುರಾಜ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ಸರದಾರಗಲ್ಲಿ ಶಾಲೆಯ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರೆವೇರಿಸಿದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಮಾನತಾಡುತ್ತಾ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದ ಶಿವಮೂರ್ತಿಸ್ವಾಮಿ ಅಳವಂಡಿ, ವೀರಭದ್ರಪ್ಪ ಶಿರೂರು, ಶಂಕ್ರಪ್ಪ ಬಂಗಾರಶೆಟ್ಟರ, ಹಾಗೂ ಇನ್ನೀತರರನ್ನು ಸ್ಮರಿಸಿದರು ಹಾಗೂ ಹೋರಾಟದಲ್ಲಿ ಹುತಾತ್ಮರಾದ ಹನುಮರೆಡ್ಡಿ ಕಲ್ಗುಡಿ, ಮತ್ತು ಶ್ರೀಮತಿ ಶಾಮವ್ವ  ಮಗಳಾದ ಶ್ರೀಮತಿ ಲಕ್ಷ್ಮವ್ವ ಸಾ|| ಬೆಟಗೇರಿ ಇನ್ನೀತರರನ್ನು ಸ್ಮರಿಸುವುರ ಜೊತೆಗೆ ವಿದ್ಯಾರ್ಥಿಗಳಿಗೆ ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚಾರಣೆಯನ್ನು ಸವಿಸ್ತಾರವಾಗಿ ತಿಳಿಸಿದರು.

Leave a Reply

Top