ಸಂಗೀತ ಸಾಹಿತ್ಯ ಮನಸ್ಸನ್ನು ಸಂಸ್ಕರಿಸುತ್ತವೆ

   ಕೊಪ್ಪಳ: ಸಂಗೀತ ಮತ್ತು ಸಾಹಿತ್ಯ ಮನುಷ್ಯರ ಮನಸ್ಸನ್ನು ಸಾಂಸ್ಕಾರಗೊಳಿಸಿ ಬದುಕನ್ನು ಹಸನುಗೊಳಿಸುತ್ತದೆ. ಎಂದು ವಂದೇ ಮಾತರಂ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಯುವ ಸೇವಾ ಸಂಸ್ಥೆ ಬುಡಶೇಟ್ನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಪ್ರಾಯೋಜಿತ ಕಾರ್ಯಕ್ರಮದಡಿ ಭಾಗ್ಯನಗರ ಜಾನ ಬಂಧು ಶಾಲೆಯಲ್ಲಿ ಏರ್ಪಡಿಸಿದ ಸುಗಮ ಸಂಗೀತ ಹಾಗೂ ರಂಗಗೀತೆ ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ ಮತ್ತು ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ಅಕ್ಬರನ ಆಸ್ಥಾನದಲ್ಲಿ ತಾನಸೇನ್ ಹಾಗೂ ಸೂರದಾಸರಂತ ಮಹಾನ್ ಸಂಗೀತಗಾರರು ಮತ್ತು ಭೋಜರಾಜನ ಆಸ್ಥಾನದಲ್ಲಿ ಕಾಳಿದಾಸ ದಂಡಿ ಮುಂತಾದ ಮಹಾನ್ ಸಾಹಿತಿಗಳಿದ್ದಿದ್ದರಿಂದ ಆ ರಾಜರು ಐತಿಹಾಸಿಕವಾಗಿ ಹೆಸರು ಪಡೆದರು. ಅಂಥ ಸಂಗೀತ ಸಾಹಿತ್ಯವನ್ನು ಕಾಪಾಡಿಕೊಂಡು ಬರಬೇಕಿದೆ. ಸಂಗೀತ ಮತ್ತು ಸಾಹಿತ್ಯ ಪರಸ್ಪರ ಆಶ್ರಯ ಪಡೆದಾಗಲೇ ಅದಕ್ಕೊಂದು ವಿಶೇಷತೆ ಬರುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಾಣಗುಳ್ಳಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ವೀರಣ್ಣ ಹುರಕಡ್ಲಿ ಸಂಗೀತದಲ್ಲಿ ರಾಮಚಂದ್ರಪ್ಪ ಉಪ್ಪಾರವರು ಗುರುವಿನ ಆಜ್ಞೆಯಂತೆ ನಡೆದುಕೊಂಡು ಉತ್ತಮ ಸಾಧನೆ ಮಾಡಿದರು. ಅಂಥವರ ಮಾದರಿಯಲ್ಲಿ ಸಂಗೀತ ವಿದಾರ್ಥಗಳು ನಡೆಯಬೇಕೇಂದರೆ ಜ್ಞಾನ ಬಂಧು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಅಧ್ಯಕ್ಷತೆವಹಿಸಿದ್ದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಕೃಷ್ಣ ಮ್ಯಾಗಳಮನಿ ಸದಸ್ಯ ನೀಲಕಂಠಪ್ಪ ಮೈಲಿ, ಮೈಲಾರಪ್ಪ ಮ್ಯಾಗಳಮನಿ ಉಪಸ್ಥಿತರಿದ್ದರು.ಕಲಾವಿದ ರಾಮಚಂದ್ರಪ್ಪ ಉಪ್ಪಾರ ಇವರ ಮಾರ್ಗದರ್ಶನದಲ್ಲಿ  ಪ್ರವೀಣ ಕುಮಾರ ಸುಗಮ ಸಂಗೀತ ಮತ್ತು ಆನಂದ ಉಪ್ಪಾರರಿಂದ ರಂಗಗೀತೆಗಳನ್ನು ಹಾಡಲಾಯಿತು ಹಾರ್ಮೋನಿಯಂ ರಾಮಚಂದ್ರಪ್ಪ ಉಪ್ಪಾರ. ತಬಲ ಕಲಾವಿದ ಮಾರುತಿ ಬಿನ್ನಾಳ ಪ್ರಾಸ್ತಾವಿಕ ಮಾತನಾಡಿದರು. ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರವೀಣ ಕುಮಾರ ಎಸ್ ಉಪ್ಪಾರ ಕಾರ್ಯಕ್ರಮ ನಿರ್ವಹಣೆಮಾಡಿ ವಂದನಾರ್ಪಣೆ ಸಲ್ಲಿಸಿದರು.

Leave a Reply