ಸಂಗೀತ ಕಾರ್ಯಕ್ರಮ

ಕೊಪ್ಪಳ- sangeetaಶ್ರೀ ವಿಶ್ವಕರ್ಮ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಕಾತರಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಶ್ರೀ ಸಿರಸಪ್ಪಯ್ಯಸ್ವಾಮಿ ಮಠದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಶೈಲ ಆರ್. ಬಡಿಗೇರ ಇವರು ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಇವರಿಗೆ ಪ್ರಭಾಕರ ಮತ್ತು ಸಂತೋಷ ಇವರು ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು. ಶ್ರೀ ಸಿರಸಪ್ಪಯ್ಯ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು., ಶೇಖರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರುದ್ರಪ್ಪ ಕೆ. ಬಡಿಗೇರ, ಮಹಾಂತೇಶ ಮಲ್ಲನಗೌಡರ, ಭಾಗವಹಿಸಿದ್ದರು. ಶ್ರೀನಿವಾಸ ಬಡಿಗೇರ ನಿರೂಪಿಸಿದರು.

Leave a Reply