ಸಂಗೀತದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ

ಕೊಪ್ಪಳ (ನೀರಲಗಿ) : ಹಳ್ಳಿಗರ ಮನೋರಂಜನೆ ಕಲೆಗಳಾದ ಜಾನಪದ, ಲಾವಣಿ ಹಾಡು, ಗಿಗಿಪದ, ಬಯಲಾಟಗಳು ಭಾರತದ ಇತಿಹಾಸದಲ್ಲಿ ತನ್ನದೆ ಆದ ಸ್ಥಾನವನ್ನು ಮತ್ತು ಶ್ರೀಮಂತಿಕೆಯನ್ನು ತಂದು ಕೊಟ್ಟಿದೆ. ಇಂತಹ ಕಲೆಗಳು ನಶಿಸಿ ಹೊಗುತ್ತಿರುವುದು ವಿಷಾಧಿನಿಯ ಇಂತಹ ವಿಶಿಷ್ಠ ಕಲೆಗಳನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ ಮೇಲೆ ಇದೆ ಸಂಗೀತ ಕೆಳುವುದರಿಂದ ಮತ್ತು ಹಾಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ವೇದಮೂರ್ತಿ ಅಂದಾನಯ್ಯಸ್ವಾಮಿ ಹಿರೇಮಠ ಹೇಳಿದರು. ಅವರು ಕೊಪ್ಪಳ ತಾಲೂಕಿನ ನೀರಲಗಿ ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರ ಗ್ರಾಮ ವಿಕಾಸ ಟ್ರಸ್ಟ್ (ರಿ) ನೀರಲಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಪ್ರಾಯೊಜನೆಯಡಿಯಲ್ಲಿ ಜರುಗಿದ ಜಾನಪದ ಗಾಯನ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.  ಗ್ರಾ.ಪಂ ಸದಸ್ಯರಾದ ಜಗನಾಥ ಆನಂದಹಳ್ಳಿ ,  ಗ್ರಾ.ಪಂ ಸದಸ್ಯರಾದ ಶ್ರೀಮತಿ ಬಸಮ್ಮ ಸಿದ್ದಪ್ಪ ಕರೆಗೌಡ್ರ, ಶ್ರೀಮತಿ ಶಾರದಮ್ಮ ಬಸವರಾಜ ಗದುಗಿನ, ಹಿರಿಯರಾದ ಬಸವನಗೌಡ ಮಾಲಿಪಾಟೀಲ, ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ, ರೇವಣಪ್ಪ ಸಿಂದೋಗಿ, ಪಾಲಪ್ಪ ಆನಂದಹಳ್ಳಿ, ರುದ್ರಪ್ಪ ಕಮ್ಮಾರ, ಮುರಡೆಪ್ಪ ಬಾರಕೇರ, ಮಹಾದೇವಪ್ಪ ಮೇಟಿ, ಬಸವರಾಜ ಜೆಲ್ಲಿ, ರಾಮಣ್ಣ ಆನಂದಳ್ಳಿ, ದೇವಪ್ಪ ದಾಸರ, ದೇವಪ್ಪ ಬಂಗಿ, ಕರಿಯಪ್ಪ ಗಟ್ಟಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಾನಪದ ಕಲಾವಿದ ದ್ಯಾಮಪ್ಪ ಎಸ್ ತಳವಾರ ಜಾನಪದ ಗಾಯನ ಅದ್ದೂರಿಯಾಗಿ ನೆರವೆರಸಿದರು. ಯಲ್ಲಪ್ಪ ಹೂಗಾರ ಹಾರ್ಮೊನಿಯಂ ಸಂಗೀತ ನುಡಿಸದರು. ಫಕೀರಪ್ಪ ತಿಗರಿ ತಬಲಾ ಸಾಥ್ ನೀಡಿದರು. a2 a

Please follow and like us:
error

Related posts

Leave a Comment