ಸಂಗೀತದಿಂದ ಆಯುಷ್ಯ ವೃಧ್ಧಿ

ಕೊಪ್ಪಳ – ತಾಲೂಕಿನ ಕಾತರಕಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯತ ಕಾತರಕಿ-ಗುಡ್ಲಾನೂರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜರುಗಿದ ಸ್ಥಳಿಯ ಪ್ರಾಯೋಜಿತ ಕಾರ್ಯಕ್ರಮದಡಿ ಜಾನಪದ ಗಾಯನ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಕುಟ್ಟುವಾಗ, ಬೀಸುವಾಗ, ಹಂತಿ ಹೊಡೆಯುವಾಗ, ರಾಶಿ ಮಾಡುವಾಗ ಬಗೆ-ಬಗೆಯ ಹಾಡುಗಳನ್ನು ಹಾಡುತ್ತಿದ್ದರು. ಆಧುನಿಕ ಯುಗದಲ್ಲಿ ಯಂತ್ರೋಪಕರಣಗಳು ನುಂಗಿ ಹಾಕಿವೆ. ಅಂತಹ ಜಾನಪದ ಕಲೆಗಳು ಮರುಕಳಿಸಬೇಕಿಗಿದೆ. ಜಾನಪದಗಳಲ್ಲಿ ಸಂಬಂಧ ಗಟ್ಟಿಗೊಳಿಸುವ ಸಂಸ್ಕೃತಿ, ಅಣ್ಣ-ತಂಗಿಯರ ಅನುಬಂಧ, ತಂದೆ-ತಾಯಿ-ಮಗುವಿನ ಬಣ್ಣಿಸುವಿಕೆ ಸತಿ-ಪತಿ, ತವರಮನೆ ಸಂಪ್ರದಾಯ ಅಡಕವಾಗಿರುವುದರಿಂದ ಮನುಷ್ಯನಿಗೆ ಶಾಂತಿ, ಸಮಾಧಾನ ಗುಣ ಲಭಿಸುತ್ತದೆ. ಅಲ್ಲದೆ ಸಂಗೀತ ಆಲೀಸುವುದರಿಂದ ಆರೋಗ್ಯವಂತರಾಗಿ ಆಯುಷ್ಯ ವೃದ್ಧಿಯಾಗುತ್ತದೆ ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಕಾಲ್ ಹೇಳಿದರು. ಮುಖ್ಯ ಅಥಿತಿಗಳಾಗಿ ಶ್ರೀ ಗವಿಸಿದ್ದೇಶ್ವರ ಅರ್ಭನ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಶಂಕರಗೌಡ ಹಿರೇಗೌಡ್ರ ಮಾತನಾಡಿ ಯುವ ಪೀಳಿಗೆಯಲ್ಲಿ ಜಾನಪದ ಅಭಿರುಚಿ ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟರೆ ನಮ್ಮ ದೇಶದ ಭವ್ಯ ಪರಂಪರೆ ಬಿಂಬಿಸುವ ಶ್ರೀಮಂತ ಕಲೆ ಜಾನಪದ ಉಳಿಸಬಹುದು ಎಂದರು.  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜ ಅಂಗಡಿ, ಸಿದ್ದನಗೌಡ ಪೋಲಿಸಪಾಟೀಲ್ ಮಲ್ಲಣ್ಣ, ಶಂಕರಗೌಡ ನಾಗನಗೌಡ, ಕೊಟ್ರಯ್ಯ, ಅಬ್ಬಿಗೇರಿಮಠ, ಮಲ್ಲಪ್ಪ ಗುಗ್ರಿ,  ಮಾಂತಪ್ಪನವರ ಸೋಮಯ್ಯ ಕೊಪ್ಪಳ, ಯಂಕಪ್ಪ ಕೋರಗಲ್,  ನಾಯಕಪ್ಪ ತಳವಾರ, ಕೊಟ್ರಯ್ಯ ಹಿರೇಮಠ, ಲಕ್ಷ್ಮಪ್ಪ ಕೂಚಿ. ಬರಮಪ್ಪ ಹುರಿಜೋಳ, ನಾಗರಾಜ ಹುರಕಡ್ಲಿ ಇತರರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment