ಸಂಕನೂರಿನಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ

ಕೊಪ್ಪಳ : ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿ.ಪಂ ಸದಸ್ಯರಾದ ಅಡಿವೆಪ್ಪ ಭಾವಿಮನಿ ಉದ್ಘಾಟನೆ ಮಾಡಿದರು. ೨೦೧೫-೧೬ನೇ ಸಾಲಿನ ವಿಧಾನ ಪರಿಷತ್ತಿನ ಸದಸ್ಯಾರ ಹಾಲಪ್ಪ ಆಚಾರ್ ಇವರ ಅನುದಾನದಲ್ಲಿ ಸಂಕನೂರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಸರ್ವಸದಸ್ಯರು ಹಾಗೂ ಊರಿನ ಮುಖಂಡರಾದ ಶರಣಪ್ಪ ಗಡಾದ, ಶರಣಪ್ಪ ಹರಿಜನ, ಗುರುರಾಜ ದೇಸಾಯಿ, ಪಿಡಿಓ ನಾಗೇಶ ಹಾಗೂ ಎಲ್ಲಾ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ಗುರುರಾಜ ದೇಸಾಯಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply