You are here
Home > Koppal News-1 > koppal news > ಶ್ರೀ ಕೃಷ್ಣ ವಿಶ್ವಮಾನ್ಯ ಆರಾಧ್ಯ ದೈವ- ಸಚಿವ ಬಸವರಾಜ ರಾಯರಡ್ಡಿ

ಶ್ರೀ ಕೃಷ್ಣ ವಿಶ್ವಮಾನ್ಯ ಆರಾಧ್ಯ ದೈವ- ಸಚಿವ ಬಸವರಾಜ ರಾಯರಡ್ಡಿ

ಕೊಪ್ಪಳ – ಶ್ರೀಕೃಷ್ಣ ವಿಶ್ವಮಾನ್ಯ ಆರಾಧ್ಯ ದೈವವಾಗಿದ್ದು ಕೃಷ್ಣನ ಜಯಂತಿ ಹಾಗೂ ಆರಾಧನೆ ನೆರೆ ರಾಷ್ಟ್ರಗಳಲ್ಲಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಗುರುವಾರದಂದು ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶಾದ್ಯಾಂತ ಕೃಷ್ಣ ಜಯಂತಿಯನ್ನು ಭಕ್ತಿ ಭಾವದ ಜೊತೆಗೆ ಪ್ರೀತಿ ಅಕ್ಕರೆಯಿಂದಲೂ ಆಚರಿಸಲಾಗುತ್ತದೆ. ಕೃಷ್ಣ ಜಯಂತಿಯನ್ನು ಕೇವಲ ಕರ್ನಾಟಕಕ್ಕೆ ಅಥವಾ ದೇಶಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ ಜಯಂತಿ ಆಚರಿಸಲಾಗುತ್ತಿದೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ಥಾನದಲ್ಲಿ ಇರುವ ಹಿಂದೂಗಳು ಹಾಗೂ ಶ್ರೀಲಂಕಾ, ಅಮೆರಿಕಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಜಾತ್ಯಾತೀತವಾಗಿ ಕೃಷ್ಣ ಜಯಂತಿ ಆಚರಿಸಲಾಗುತ್ತದೆ. ಕೃಷ್ಣ ಒಬ್ಬ ಐತಿಹಾಸಿಕ ಹಾಗೂ ಪೌರಾಣಿಕ ಪುರುಷನಾಗಿದ್ದನು. ಗ್ರಾಮೀಣ ಜನರನ್ನೊಳಗೊಂಡು ಪ್ರತಿಯೊಬ್ಬರಿಗೂ ಕೃಷ್ಣನ ಚರಿತ್ರೆಯ ಬಗ್ಗೆ ಚಿರಪರಿಚಿತವಿದೆ. ಕೃಷ್ಣ ಪಾತ್ರ ಮನುಷ್ಯನ ಜೀವನ ಶೈಲಿ ಹೇಗಿರಬೇಕು ಎಂದು ತಿಳಿಸಿಕೊಡುವ ಮೂಲಕ ಜನಪ್ರಿಯತೆ ಪಡೆದಿದೆ. ರಾಮಾಯಣ ಹಾಗೂ ಮಹಾಭಾರತ ಕಥೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಬಯಲಾಟ, ದೊಡ್ಡಾಟಗಳನ್ನು ಆಡುತ್ತಾರೆ. ಕೃಷ್ಣನನ್ನು ಪುರುಷೋತ್ತಮ ಎಂದು ಕರೆಯುತ್ತಾರೆ. ಕೃಷ್ಣನು ಮಾನವರಲ್ಲಿಯೇ ಶ್ರೇಷ್ಠ ವಿಚಾರ ಉಳ್ಳವನು ಎಂದರ್ಥ ನೀಡುತ್ತದೆ. ಕೃಷ್ಣನ ಮಾವ ಕಂಸ ಸಂಪತ್ತು ಹಾಗೂ ಸಾಮ್ರಾಜ್ಯದ ಆಸೆಗಾಗಿ, ಅಧಿಕಾರದ ಆಸೆಗಾಗಿ ಸ್ವತಃ ಸಹೋದರಿ ದೇವಕಿಯನ್ನು ಮತ್ತು ಆಕೆಯ ಮಾವನನ್ನು ಬಂಧಿಯನ್ನಾಗಿಸಿದ. ಆಕೆಗೆ ಹುಟ್ಟಿದ ಆರು ಜನ ಮಕ್ಕಳನ್ನು ಕೊಂದು ಹಾಕಿದ. ಒಂದು ಮಗು ಅನಾರೋಗ್ಯದಿಂದ ಸಾಯುತ್ತದೆ. ದೇವಕಿ ಕಾರಾಗೃಹದಲ್ಲಿರುವಾಗ ಶ್ರೀಕೃಷ್ಣ ಜನ್ಮ ತಾಳಿದ್ದಾನೆ. ಹೀಗೆ ಮಹಾಭಾರತದಲ್ಲಿ ಕೃಷ್ಣನ ಬಗ್ಗೆ ತಿಳಿಯಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ಜಯಂತಿ ಆಚರಣೆಯನ್ನು ಸರಕಾರದಿಂದ ಆಚರಿಸಲು ನಿರ್ಧರಿಸಿ ಜಾರಿಗೆ ತಂದರು. ಇದರಿಂದ ರಾಜ್ಯದಲ್ಲಿ ಸರಕಾರದಿಂದಲೇ ಕೃಷ್ಣ ಜಯಂತಿ ಆಚರಿಸಲಾಗುತ್ತಿದೆ ಎಂದರು. ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಪ್ರಭುರಾಜ ನಾಯಕ ಅವರು ಕೃಷ್ಣನ ಕುರಿತು ಉಪನ್ಯಾಸ ನೀಡಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಕೃಷ್ಣ ಬೈರೇಗೌಡ , ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ,  ಇತರರು ಇದ್ದರು.

????????????????????????????????????

Leave a Reply

Top