You are here
Home > Koppal News-1 > koppal news > ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಧ್ವಜಾರೋಹಣ

ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಧ್ವಜಾರೋಹಣ

mlaಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮುಂಜಾನೆ ೭೦ ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಹಿಟ್ನಾಳ ಧ್ವಜಾರೋಹಣ ನೆರವೇರಿಸಿದರು, ಬಳಿಕ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿ ಬ್ರಿಟಿಷರ ಕಪಿಮುಷ್ಠಿಯಿಂದ ಈ ದೇಶವನ್ನು ಬಿಡುಗಡೆಗೊಳಿಸಿದ ಎಲ್ಲ ಹುತಾತ್ಮರಿಗೆ ಇಂದು ನಾವೆಲ್ಲ ನಮಿಸೋಣ. ಹಿರಿಯರ ತ್ಯಾಗ ಬಲಿದಾನಗಳ ಮೂಲಕ ಬಂದಂತಹ ಸ್ವಾತಂತ್ರ್ಯವನ್ನು ಇಂದು ಉಳಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.ಮುಂದುವರೆದು ಮಾತನಾಡಿ ನಮ್ಮ ಭಾಗ ೩೭೧ ಜೆ ಮಾದರಿಗೆ ಒಳಪಟ್ಟದ್ದರಿಂದ ವಿದ್ಯಾರ್ಥಿಗಳೆಲ್ಲರೂ ಸತತ ಓದು, ನಿರಂತರ ಅಧ್ಯಯನದಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಸರ್ಕಾರ ನಿಮ್ಮ ಜೊತೆಗಿದೆ ಎಂದರು. ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಸಹ ಮಾತನಾಡಿದರು. ಈ ಸಂದರ್ಭದಲ್ಲಿ ದೈಹಿಕ ನಿದೇಶಕಿ ಶೋಭಾ, ಉಪನ್ಯಾಸಕರಾದ ಪ್ರಕಾಶ ದೇಶಪಾಂಡೆ, ನಟರಾಜ ಪಾಟೀಲ, ಪ್ರಕಾಶಗೌಡ, ಶ್ರೀಮತಿ ಶುಭಾ, ,ಶ್ರೀಮತಿ ನಂದಾ, ಅತಿಥಿ ಉಪನ್ಯಾಸಕರಾದ ಡಾ.ಪ್ರಕಾಶ ಬಳ್ಳಾರಿ, ಯೆಂಕಪ್ಪ, ಸಿಬ್ಭಂಧಿಗಳಾದ ರಾಜಶೇಖರ , ಜಯಪ್ರಕಾಶ, ಸುರೇಶ,ರಮೇಶ ಉಪಸ್ಥಿತರಿದ್ದರು. ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Top