ಶಾಲಾ ವಾಷಿಕೋತ್ಸವ ಕಾರ್ಯಕ್ರಮ

ಕೊಪ್ಪಳ :  ನಗರದ ಭಾಗ್ಯನಗರದ ವಿದ್ಯಾರಣ್ಯ ಪಬ್ಲಿಕ್ ಸ್ಕೂಲ್  ೭ನೇ ಶಾಲಾ ವಾರ್ಷೀಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಮಹಾದೇವ ಮುಜುಗುಂಡು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಪ್ಪ ಅಂಬಿಗರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವೆಂಕಪ್ಪ ಬಾರಕೇರ, ವೀರಭದ್ರಯ್ಯ ಸ್ವಾಮಿ ಹಿರೇಮಠ, ಕರ್ನಾಟಕ ಕ್ರಾಂತಿ ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪರಶುರಾಮ ಹುಬ್ಬಳ್ಳಿ, ಜನಪದ ಕಲಾವಿದರು ರಾಜ್ಯ ಪ್ರಶಸ್ತಿ ವಿಜೇತರಾದ ಮೆಹಬೂಬ ಕಿಲೇದಾರ ಮತ್ತು ಫಕೀರಪ್ಪ ಎಮ್ಮಿಯರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರಣ್ಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೀತಾ ಬಳೀಗಾರ, ಕಾರ್ಯದರ್ಶಿ ಪರುಶುರಾಮ ಬಿ ಗಾಳಿ, ವಿದ್ಯಾರ್ಥಿಗಳು, ಪಾಲಕರು, ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Leave a Reply