ಶಾಂತಿ ಮತ್ತು ಮಾನವೀಯತೆ ಸಮಾರೋಪ ಸಮಾರಂಭ

ಫಾದರ್ ಸೆಬೆಸ್ಟಿನ್ ಕ್ರಾನಾಡ್ – ನಿಮ್ಮ ನರೆಯುವನನ್ನು ನಿನ್ನಂತೆ ಪ್ರೀತಿಸು. ಬೇರೆಯವರು ನಿನಗೆ ಏನು ಮಾಡಬೇಕು ಅನಿಸುತ್ತದೆಯೋ ಅದನ್ನು ಇತರರಿಗೆ ನೀಡು ನಮ್ಮ ಭಿನ್ನತೆಗಳನ್ನು ಮರೆತು ಒಂದಾಗಬೇಕು. ನಾವು ಒಬ್ಬರೊನ್ನಬ್ಬರು ಪ್ರೀತಿಸಿ, ಗೌರವಿಸುವುದನ್ನು ಕಲಿಯಬೇಕಾಗಿದೆ.

ಶ್ರೀ ಚೈತನ್ಯಾನಂದ ಸ್ವಾಮಿಗಳು- ಧರ್ಮಗ್ರಂಥಗಳೂ ಎಂದು ದ್ವೇಷವನ್ನು ಕಲಿಸಲಿಲ್ಲ. ಬದಲಾಗಿ ಮಾನವೀಯತೆಯನ್ನು ಕಲಿಸಿವೆ. ದೇಶಗಳ ರಕ್ಷಣೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲುತ್ತಿದೆ. ಗಾಳಿ ಒಂದೇ, ನೀರು ಒಂದೇ ನಮ್ಮ ಆಹಾರ ಒಂದೇ ಹಾಗಾದರೆ ಈ ಭಿನ್ನತೆ ಮತ್ತು ತಾರತಮ್ಯ ಏಕೆ ? ಭಾರತೀಯ ಸಂಸ್ಕೃತಿ ವಿಶಾಲವಾದ ಸಂಸ್ಕೃತಿಯಾಗಿದೆ.

 ಚನ್ನಮಲ್ಲ ಮಹಾಸ್ವಾಮಿಗಳು ಕನಕಗಿರಿ – ಧಾರ್ಮಿಕ ತತ್ವಗಳನ್ನು ಆಚರಣೆಗೆ ತಾರದೇ ಇರುವುದರಿಂದ ಇಂದು ಜಗತ್ತಿನಲ್ಲಿ ಆಕಾಂಕ್ಷಿ ನೆಲೆಸಿದೆ. ಮನುಷ್ಯ ಮಾನವೀಯತೆ ಇಲ್ಲದ ಜೀವನ ಸಾಗಿಸುತ್ತಿರುವುದೇ ಅಶಾಂತಿಗೆ ಕಾರಣ ಎಂದರು. ಚಿಂತನೆಗಳಿಂದ ಶಾಂತಿ ಪ್ರಜ್ಞೆ ಲಭಿಸುತ್ತದೆ.

ಮಹಮ್ಮದ್ ಕುಂಇ – ಜಗತ್ತಿನಲ್ಲಿ ಆಯುಧ ವ್ಯಾಪಾರ ಬಹುದೊಡ್ಡ ವ್ಯಾಪಾರವಾಗಿದೆ. ಜಗತ್ತನ್ನು ಆಯುಧ ವ್ಯಾಪಾರಿಗಳು ನಿಯಂತ್ರಿಸುತ್ತದೆ. ಆಯುಧ ವ್ಯಾಪಾರಿಗಳೂ ಬಂಡವಾಳಶಾಇ ಶಕ್ತಿಗಳಿಗೆ ಅಶಾಂತಿ ಬೇಕು ಯುದ್ಧಬೇಕು. ವೈವಿಧ್ಯತೆಯಲ್ಲಿ ಏಕತೆ ಈ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಹೆಮ್ಮೆಯಾಗಿದೆ. ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಧರ್ಮವನ್ನು ಪಾಲಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಧರ್ಮದ ಚಿಹ್ನೆಗಳನ್ನು ಕಂಡು ಯಾರೂ ಸಂಶಯಪಡುತ್ತಿರಲ್ಲಿ. ನಮ್ಮಲ್ಲಿ ಜಾತಿ ಮತದ ವಿಷಬೀಜ ಬಿತ್ತಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲಿ ಶಾಂತಿ ಇಲ್ಲವೋ ಅಲ್ಲಿ ಅಭಿವೃದ್ಧಿ ಇಲ್ಲ ಸಂಶಯಗಳಿಂದ ಮುಕ್ತವಾದ ಸಂಘರ್ಷಗಳಿಂದ ಮುಕ್ತವಾದ ದೇಶ ಕಟ್ಟಬೇಕಾಗಿದೆ.shanti1

ಕೋಮು ಸಾಮರಸ್ಯ ಕಾಪಾಡಲು ಹಾಗೂ ಶಾಂತಿಯ ಪರಿಸ್ಥಾಪನೆಗಾಗಿ ಶ್ರಮಿಸುತ್ತಿರುವ ಡಾ.ಮಹಾಂತೇಶ ಮಲ್ಲನಗೌಡ ಹಾಗೂ ಗಂಗಾವತಿ ಸಿ.ಹೆಚ್.ನಾರಿನಾಳ ಇವರನ್ನು ಜಮಾಅತೆ ಇಸ್ಲಾಮಾ ಹಿಂದ್ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

Leave a Reply