ಶಾಂತಿ ಮತ್ತು ಮಾನವಿಯತೆಗಾಗಿ ರಾಷ್ಟ್ರ ಅಭಿಯಾನ

ಕೊಪ್ಪಳ ನಗರದ ಕಲಂ ಪಬ್ಲಿಕ್ ಶಾಲೆಯಲ್ಲಿ ಶಾಂತಿ ಮತ್ತು ಮಾನವೀಯತೆಯ ರಾಷ್ರವ್ಯಾಪ್ತಿ ಅಭಿಯಾನದ ಪ್ರಯುಕ್ತ ಕೊಪ್ಪಳ ನಗರದ  ವಾರ್ಡನಲ್ಲಿ ಕಲಂ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಬನ್ನಿಕಟ್ಟಿ, ಪದಕಿ ಲೇ ಔಟ ಹಾಗೂ ಅಮೀನ ಪುರದಲ್ಲಿ ಪ್ರಭಾತ ಪೇರಿಯ ಮೂಲಕ ಶಾಂತಿ ಮತ್ತು ಮಾನವೀಯತೆ ಸಾರ್ವಘೊಷಣೆಗಳನ್ನು ಹಾಗೂ ಕೂಗುವುದರೊಂದಿಗೆ ಆಯೋಜಿಸಲಾಗಿತ್ತು.

v1
ರಾಷ್ರವ್ಯಾಪ್ತಿ ಸಂಘಟನೆಯಾದ ಜಮಾತ ಇಸ್ಲಾಮಿ ಹಿಂದ ನ ಕೊಪ್ಪಳ ಘಟಕದ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನವು ದಿ: ೨೧ ನೇ ಅಗಸ್ಟ ನಿಂದ ಪ್ರಾರಂಭವಾಗಿ ೪ನೇ ಸಪ್ಟಂಬರ ೨೦೧೬ ರ ವರಗೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಈಗಾಗಲೇ ಚಾಲನೆಯಲ್ಲಿದ್ದು ಮಕ್ಕಳ ಪ್ರಭಾತ ಪೇರಿ ರ್‍ಯಾಲಿಯು ಸಹ ಆ ಕಾರ್ಯಕ್ರಮಗಳು ಒಂದು ಭಾಗವಾಗಿರುತ್ತದೆ ಎಂದು ಹಾಗೂ ಇದರ ಉದ್ದೇಶವು ಮೂಲಕ ಸಮಾಜದ ವಿಭಿನ್ನ ವ್ಯಕ್ತಿಗಳಿಗೆ ಸಮಾಜ ಸುಧಾರಕರಿಗೆ, ರಾಜಕೀಯ ನೇತಾರರಿಗೆ, ದೇಶದ ಪ್ರತಿಯೊಬ್ಬ ಪ್ರಜೆಗೆ ನಮಗೆ ಶಾಂತಿ ಮತ್ತು ಮಾನವಿಯತೆಯ ಸಾಕಾರ ಮೂರ್ತಿಯಾಗಿರುವಂತಹ ಭರತ ಭೂಮಿ ಅಥವಾ ಭಾರತ ದೇಶ ಬೇಕು ಎನ್ನುವ ಸಂದೇಶವನ್ನು ಮಕ್ಕಳ ಮೂಲಕ ಸಮಾಜಕ್ಕೆ ಕೊಡಮಾಡಿಸಲಾಗುತ್ತದೆ ಎಂದು ಅಭಿಯಾನದ ಸಂಚಾಲಕರಾದ ತಾಜುದ್ದೀನ್ ದೊಟಿಹಾಳ ಹೇಳಿದರು.ಈ ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿ ಹಿಂದನ ಅಮೀನ ಪುರ ಘಟಕದ ಕಾರ್ಯಕರ್ತರಾದ ಮಹಮ್ಮದ ಖಾಜಾ ಹುಸೇನ್ ಸಾಬ್ ರವರು ರಿಬ್ಬನ್ ಕತರಿಸುವ ಮೂಲಕ ಮಕ್ಕಳ ಪ್ರಬಾತ ಪೇರಿಗೆ ಚಾಲನೆ ನೀಡಿದರು. ಆಮಾತೆ ಇಸ್ಮಾಮ ಹಿಂದನ ಕೊಪ್ಪಳ ಘಟಕದ ಮಹಿಳಾ ವಿಭಾಗದ ಅಧ್ಯಕ್ಷತೆ ಸಬೀಹಾ ಪಟೇಲ್ ಹಾಗೂ ಗರ್ಲ್ಸ ಇಸ್ಲಾಮಿಕ್ ಆರ್ಗನೈಜೆಶನ್ ವಿದ್ಯಾರ್ಥಿನಿಯರು ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಆಯೋಜಸಿದರು ಹಾಗೂ ಇತರ ಕಾರ್ಯಕರ್ತರು ಆದೀಲ್ ಪಟೇಲ್, ಇಸ್ಹಾಖ ಪುಜೇಲ್, ಸರಫ್ರಾಜ್, ಮಹಮ್ಮದ್ ಫಹಿಮುದ್ದಿನ್, ಜಕ್ರಿಯಾ, ಜಮೀರ್, ಅಹ್ಮದ್ ಪಾಷಾ, ಶಾಲಾ ಅಧ್ಯಾಪಕ ವರ್ಗವು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Please follow and like us:
error