ವ್ಯಕ್ತಿತ್ವ ವಿಕಾಸನ ಮತ್ತು ಉದ್ಯೋಗ ಕ್ಷಮತೆ ಒಂದು ದಿನದ ಕಾರ್ಯಗಾರ


ಕೊಪ್ಪಳ : ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಹಾಗು ಐ.ಕ್ಯೂ.ಎ.ಸಿ ಘಟಕದ ಸಹಯೋಗದಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ ಎಸ್ಸಿ ಅಂತಿಮ ವಿದ್ಯಾರ್ಥಿಗಳಿಗಾಗಿ ಪರ್‍ಸ್ನಾಲಿಟಿ ಡೆವಲಪ್ಮೆಂಟ್ ಅಂಡ್ ಎಂಪ್ಲಾಯ್ಬಿಲಿಟಿ (ವ್ಯಕ್ತಿತ್ವ ವಿಕಾಸನ ಮತ್ತು ಉದ್ಯೋಗ ಕ್ಷಮತೆ ) ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕರಾಗಿ ದೀಪ ಬೆಳಗಿಸಿ ಬಳಿಕ ಮಾತನಾಡಿದ ಪತ್ರಕರ್ತ ಚಾಮರಾಜ ಸವಡಿ ಸತತ ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಉತ್ತಮ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಲು ಕರೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುವದರ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ, ಚರಿತ್ರೆ, ರಾಜಕೀಯಶಾಸ್ತ್ರ, ಸಾರ್ವಜನಿಕ ಆಡಳಿತ ಮೊದಲಾದ ವಿಷಯಗಳ ಬಗ್ಗೆ ಆಳವಾದ ಅರಿವು ಅಗತ್ಯ . ಅಲ್ಲದೇ ಪತ್ರಿಕೆಗಳನ್ನು ಓದುವ ಅಭ್ಯಾಸ ಇಟ್ಟುಕೊಳ್ಳಬೇಕೆಂದರು.
ಅತಿಥಿಗಳಾಗಿ ರಾಯಚೂರಿನ ಸರಕಾರಿ ಪ್ರಥಮ ದರ್ಜೆಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ ಪ್ರಾಣೇಶ, ಸ್ಪರ್ಧಾ ಸ್ಪೂರ್ತಿಯ ಪತ್ರಿಕೆಯ ಹಿರಿಯ ಸಂಪಾದಕ ಐ.ಜಿ. ಚೌಗಲಾ ಆಗಮಿಸಿದ್ದರು. ಅಧ್ಯಕ್ಷತೆ ಪ್ರಾಚಾರ್ಯಡಾ ಸಿ.ಬಿ ಚಿಲ್ಕರಾಗಿ ವಹಿಸಿ ವಿದ್ಯಾರ್ಥಿಗಳು ಇಂತಹ ಸದುಪಯೋಗ ಪಡೆದುಕೊಂಡು ಭವಿಷ್ಯ ಕಂಡುಕೊಳ್ಳಬೇಕೆಂದರು.
ನಂತರ ಜರುಗಿದ ಮೋಟಿವೇಶನ್ ಎಂಪ್ಲಾಯ್ಬಿಲಿಟಿ ಮತ್ತು ವ್ಯಕ್ತಿತ್ವ ವಿಕಾಸಈ ವಿಶೇಷ ಉಪನ್ಯಾಸಗಳಲ್ಲಿ ಸ್ಪರ್ಧಾ ಸ್ಪೂರ್ತಿಯ ಪತ್ರಿಕೆಯ ಹಿರಿಯ ಸಂಪಾದಕ ಐ.ಜಿ. ಚೌಗಲಾ, ಧಾರವಾಡದ ಕ್ಲಾಸಿಕ್ ಕೆ.ಎ.ಎಸ್, ಐ.ಎ.ಎಸ್ ಸ್ಟಡೀ ಸರ್ಕಲ್ ಸಂಸ್ಥೆಯ ನವೀನ್ ಕುಮಾರ್, ಸಂಚಾಲಕರಾದ ರಾಘವೇಂದ್ರ ರಾಯರೆಡ್ಡಿ ಹಾಗೂ ರಾಯಚೂರಿನ ಸರಕಾರಿ ಪ್ರಥಮ ದರ್ಜೆಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ ಪ್ರಾಣೇಶ ಕುಲಕರ್ಣಿ ಇವರುಗಳು ವಿಶೇಷ ಉಪನ್ಯಾಸ ನೀಡುವದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಐ.ಕ್ಯೂ.ಎ.ಸಿ ಸಂಚಾಲಕ ಡಾ ಪ್ರಭುರಾಜ ನಾಯಕ್, ಪ್ರಾಧ್ಯಾಪಕರಾದ ಮಾರುತೇಶ, ನಟರಾಜ ಪಾಟೀಲ, ಗಾಯತ್ರಿ ಭಾವಿಕಟ್ಟಿ, ಭಾಗ್ಯಜ್ಯೋತಿ, ಶುಭಾ, ಸಂತೋಷ ಕುಮಾರಿ ದೈಹಿಕ ನಿರ್ದೇಶಕಿ ಶೋಭಾ ಕೆ ಎಸ್ ಇದ್ದರು.

ಪಿ.ಬಿ

Please follow and like us:
error