ವೇತನ ಪಾವತಿಗೆ ಮನವಿ

ಕೊಪ್ಪಳ- ಹೊಸದಾಗಿ ನೇಮಕವಾದ ಶಿಕ್ಷಕರಿಗೆ ವೇತನ 7 ತಿಂಗಳುಗಳ ವೇತನ ಪಾವತಿ ಮಾಡುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಉಪನಿರ್ದೇಶಕರಾದ ಶ್ಯಾಮಸುಂದರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಹೊಸದಾಗಿ ನೇಮಕವಾದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರಿಗೆ 7 ತಿಂಗಳುಗಳಿಂದ ವೇತನ ನೀಡಿಲ್ಲ. 7 ತಿಂಗಳುಗಳಿಂದ ವೇತನ ಪಾವತಿಯಾಗದಿರುವುದರಿಂದ ಹೊಸ ಶಿಕ್ಷಕರು ತಮ್ಮ ಜೀವನ ನಿರ್ವಹಣೆ ಕಷ್ಟಕರವಾಗಿದೆ.ಕೂಡಲೆ ಹೊಸದಾಗಿ ನೇಮಕವಾದ ಶಿಕ್ಷಕರುಗಳಿಗೆ ವೇತನವನ್ನು ಪಾವತಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆಯನ್ನು ನೀಡಬೇಕು ಒತ್ತಾಯಿಸಿಯಿಸಿದರು.ಮನವಿ ಸ್ವೀಕರಿಸಿದ ಬಳಿಕ ಉಪನಿರ್ದೇಶಕರಾದ ಶ್ಯಾಮಸುಂದರ ಮಾತನಾಡಿ,ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು,ಶೀಘ್ರವೇ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕರೆಸಿ,ಇದರ ಬಗ್ಗೆ ಪರಿಶೀಲಿಸಿ ಶೀಘ್ರವೇ ಹೊಸ ಶಿಕ್ಷಕರುಗಳಿಗೆ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗುತ್ತದೆ ಎಂಬ ಭರವಸೆ ನೀಡಿದರು. ಈ ಸಮಯದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಕಮಲಾಪುರ,ನಿರ್ದೇಶಕರಾದ ಇಸ್ಮಾಲ್,ಪ್ರದೀಪಕುಮಾರ,ಮಂಜುನಾಥ ಹಾಜರಿದ್ದರು.
B

Please follow and like us:
error

Related posts

Leave a Comment