You are here
Home > Koppal News-1 > koppal news > ವೃತ್ತಿಯಲ್ಲಿ ಪಾವಿತ್ರೆಯನ್ನು ಕಾಪಾಡಿಕೊಳ್ಳಬೇಕು- ಉಮೇಶ ಪೂಜಾರ

ವೃತ್ತಿಯಲ್ಲಿ ಪಾವಿತ್ರೆಯನ್ನು ಕಾಪಾಡಿಕೊಳ್ಳಬೇಕು- ಉಮೇಶ ಪೂಜಾರ

ಕೊಪ್ಪಳ- ವೃತ್ತಿಯಲ್ಲಿ ಪಾವಿತ್ರೆಯನ್ನು ಕಾಪಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು.
ತಾಲೂಕಿನ ಹನಕುಂಟಿಯಲ್ಲಿ ಸರಕಾರಿ ಅಂಗವಿಕಲ ನೌಕರರ ಸಂಘ ಹಾಗೂ ಹನಕುಂಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪ್ರತಿಯೊಂದು ವೃತ್ತಿಯು ಅತ್ಯಂತ ಪವಿತ್ರವಾದದ್ದು,ಆದರೆ ವೃತ್ತಿಯಲ್ಲಿ ಪಾವಿತ್ರ್ಯತೆಯನ್ನು ಕಾಯ್ದುಕೊಂಡಾಗ ಮಾತ್ರ ವೃತ್ತಿಗೆ ಗೌರವ ಸಲ್ಲಿಸಿದ್ದಂತಾಗುತ್ತದೆ.ಎಲ್ಲಾ ವೃತ್ತಿಗಿಂತಲೂ ಶಿಕ್ಷಕರ ವೃತ್ತಿಯು ಬಹಳ ಗೌರವಯುತವಾದ ವೃತ್ತಿಯಾಗಿದ್ದು,ಶಿಕ್ಷಕರಾದವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ವೃತ್ತಿಗೆ ಗೌರವ ದೊರೆಯುತ್ತದೆ.ಶಿಕ್ಷಕರಾದವರ ಮೇಲೆ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ.ಅಂಥಹ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕಿದೆ.ಒಂದು ದೇಶದ ಪ್ರಗತಿಯು ನಾಲ್ಕು ಗೊಡೆಗಳ ನಡುವೆ ನಿಮಾರ್ಣವಾಗುವುದರಿಂದ ಶಿಕ್ಷಕರಾದವರು ಹೆಚ್ಚಿನ ಕಾಳಜಿ ವಹಿಸಿ ,ಸಮರ್ಪಕ ರೀತಿಯಲ್ಲಿ ಶಿಕ್ಷಣವನ್ನು ಪ್ರತಿಯೊಂದು ಮಗುವಿಗೆ ನೀಡಿದ್ದೆಯಾದರೆ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಶಾಲೆಯ ಮುಖ್ಯೋಪಾಧ್ಯಾರಾದ ರಾಮಚಂದ್ರಪ್ಪ ಬಾರಕೇರ,  ಭರಮಪ್ಪ ಕಟ್ಟಿಮನಿ ಶಂಕರಗೌಡ,  ಮಂಜುನಾಥ, ಅಂದಪ್ಪ ಬೋಳರೆಡ್ಡಿ,ಗಂಗಪ್ಪ ಅಂಬಿಗೇರ,ಈಶಪ್ಪ ಮತ್ತೂರು, ವೆಂಕಟೇಶಪ್ಪ ಕೋಟೆ, ಶಿಕ್ಷಕರಾದ ಗವಿಸಿದ್ದಪ್ಪ ಜೀರ,ನಿಂಗಪ್ಪ ಅಗಸಿಮುಂದಿನ,ರವಿನಾಯ್ಕ,ಮಹಾಲಕ್ಷ್ಮೀ ಮುಂತಾದವರು ಹಾಜರಿದ್ದರು.

Leave a Reply

Top