ವಿದ್ಯಾರ್ಥಿಗಳು ನಿಮ್ಮೊಳಗಿನ ಅದಮ್ಯ ಚೇತನ ಗುರುತಿಸಿಕೊಳ್ಳಿ – ಮಹೇಶ ಮಾಸಲ್

 ಕೊಪ್ಪಳ : ಜೀವನ ದರ್ಶನದ ಕಾರ್ಯಕ್ರಮವು ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹೇಶ ಮಾಸಲ್, ಅಡಪ್ಟ್ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಅಧ್ಯಕ್ಷರು, ವ್ಯಕ್ತಿತ್ವ ವಿಕಸನ ತರಬೇತದಾರರು, ಧಾರವಾಡ ವಿದ್ಯಾರ್ಥಿಗಳ ವ್ಯಕ್ತಿತ್ವ ಉಪನ್ಯಾಸ ಮಾಲಿಕೆಯಡಿಯಲ್ಲಿ ಉಪನ್ಯಾಸ ನೀಡುತ್ತ ವಿದ್ಯಾರ್ಥಿಗಳು ತಮ್ಮ ಅಂತರ್‍ಯದಲ್ಲಿ ಅಡಗಿರುವ ಅದಮ್ಯ ಚೇತನವನ್ನು ಗುರುತಿಸಿಕೊಂಡರೇ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಬಾಹ್ಯ ಪ್ರಪಂಚದಲ್ಲಿರುವ ಉಳಿದೆಲ್ಲಾ ಶಕ್ತಿಗಳಿಗಿಂತ ಮಾನವನ ಅಂತರ್‍ಯದಲ್ಲಿರುವ ಶಕ್ತಿ ಬಲಿಷ್ಠವಾದದ್ದು. ಇಂತಹ ಶಕ್ತಿಯನ್ನು ಕಿರಿಯ ವಯಸ್ಸಿನಲ್ಲಿಯೇ ಕಂಡುಕೊಂಡ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಎ.ಪಿ.ಜೆ.ಅಬ್ದುಲ್ ಕಲಾಂಗಳಂತಹ ಸಾಧಕರು ತಮ್ಮ ಜೀವನದಲ್ಲಿ ಉತ್ತುಂಗ ಶಿಖರಕ್ಕೇರಿದ್ದಾರೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೇ ಮಾತ್ರ ಸಾಲದು. ಶಿಕ್ಷಣದೊಂದಿಗೆ ಜೀವನದ ಕೌಶಲ್ಯಗಳನ್ನು ಕಲಿತರೆ ಮಾತ್ರ ಜೀವನ ಸಮೃದ್ಧವಾಗುತ್ತದೆ. ಈ ಜೀವನ ದೇವರು ಕೊಟ್ಟ ಅಮೂಲ್ಯ ಕಾಣಿಕೆಯಾಗಿದ್ದು ಕಾಣಿಕೆಯನ್ನು ಸುರಕ್ಷಿತವಾಗಿ ಸಮೃದ್ಧವಾಗಿ ವೃದ್ಧಿಸಿಕೊಳ್ಳಬೇಕು. gaviನಿಸರ್ಗವೇ ವಿಶ್ವವಿದ್ಯಾಲಯವಾಗಿದ್ದು ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿಗಳು ನಿಸರ್ಗದಲ್ಲಿನ ಪ್ರತಿಕ್ಷಣವನ್ನು ಆನಂದಿಸುತ್ತವೆ. ಆದರೆ ಮನುಷ್ಯರು ಮಾತ್ರ ತಾವೇ ಕಟ್ಟಿಕೊಂಡ ಹಲವಾರು ಸಂಕುಚಿತ ಗೋಡೆಗಳಿಂದ ಹೊರಬರದೇ ಜೀವನವೇ ಭಾರವೆಂದು ನರಳುತ್ತಾರೆ. ನಮ್ಮ ಕರ್ತವ್ಯಗಳನ್ನು ಜಾಣ್ಮೆಯಿಂದ ನಿರ್ವಹಿಸಿದರೆ ಅದುವೇ ಜೀವನದ ಸಂಭ್ರಮಾಚರಣೆಯಾಗಿದೆ. ಜೀವನದ ಬಗೆಗಿನ ವಿದ್ಯಾರ್ಥಿಗಳ ದೃಷ್ಟಿಕೋನ ವಿಶಾಲವಾಗಬೇಕು. ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೇ ಜೀವನವನ್ನು ನಿರ್ವಹಿಸುವುದಕ್ಕಾಗಿ ವಿದ್ಯೆ ಪಡೆಯಬೇಕು. ಜಗತ್ತಿನ ಉಳಿದೆಲ್ಲಾ ಕಲೆಗಳಿಗಿಂತ ಜೀವನ ಕಲೆ ಶ್ರೇಷ್ಠವಾಗಿದೆ. ಈ ಕಲೆಯನ್ನು ಯಾವುದೇ ವಿಶ್ವವಿದ್ಯಾಲಯ ನೀಡುವದಿಲ್ಲ. ಇಂತಹ ಕಲೆಯನ್ನು ನಿಸರ್ಗ ಪ್ರತಿಕ್ಷಣವೂ ಕಲಿಸುತ್ತದೆ.

Please follow and like us:
error