ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು – ಎ.ಶ್ಯಾಂಸುಂದರ

ಕೊಪ್ಪಳ – ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎ.ಶ್ಯಾಂಸುಂದರ ಹೇಳಿದರು. sclನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ,ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕಾದರೆ ಮೊದಲು ತಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳ ಬೇಕು.ವಿಶೇಷವಾಗಿ ಮಕ್ಕಳು ತಮ್ಮ ವೈಯಕ್ತಿಕ ಆರೋಗ್ಯದ ಕಡಗೆ ಹೆಚ್ಚು ಗಮನ ಹರಿಸಬೇಕು.ದೈಹಿಕವಾಗಿ ಸದೃಡವಾಗಿದ್ದಾಗ ಮಾತ್ರ ಮಾನಸೀಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ.ಜಂತುಹುಳುಗಳ ನಿವಾರಣೆಗಾಗಿ ಆರೋಗ್ಯ ಇಲಾಖೆಯು ಪ್ರತಿ ವಿದ್ಯಾರ್ಥಿಗೆ ಆರು ತಿಂಗಳಿಗೆ ಒಂದರಂತೆ ಮಾತ್ರೆ ನೀಡುತ್ತಿದ್ದಾರೆ.ಪ್ರತಿಯೊಂದು ಮಗು ಮಾತ್ರೆಯನ್ನು ಸೇವಿಸಿ ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಬೇಕು.ಮಾತ್ರೆಗಳನ್ನು ನೀಡುವಾಗ ಶಿಕ್ಷಕರು ತಯಾರಾದ ದಿನಾಂಕಗಳನ್ನು ಕಡ್ಡಾಯವಾಗಿ ವಿಕ್ಷಿಸಿ ನಂತರ ಮಕ್ಕಳಿಗೆ ಮಾತ್ರೆ ನೀಡಬೇಕು ಎಂದು ಹೇಳಿದರು. ಶಿಕ್ಷಕರಾದ  ಬೀರಪ್ಪ ಅಂಡಗಿ ಚಿಲವಾಡಗಿ , ಗುರುರಾಜ ಕಟ್ಟಿ . ಶ್ರೀನಿವಾಸರಾವ್ ,ವಿಜಯಾ ಹಿರೇಮಠ, ಶಂಕ್ರಮ್ಮ ಬಂಗಾರಶೆಟ್ಟರ್ ಪಾಲ್ಗೊಂಡಿದ್ದರು.

Please follow and like us:
error

Related posts

Leave a Comment