ವಿದೇಶಕ್ಕೆ ತೆರಳುವ ಕೊಪ್ಪಳ ಕ್ರೀಡಾಪಟುವಿಗೆ ಡಿಸಿ ಅವರಿಂದ ಸಹಾಯಧನ ಚೆಕ್

 ವಿಯೇಟ್ನಾಂನಲ್ಲಿ ಜರುಗಲಿರುವ ೦೫ ನೇ ಏಷಿಯನ್ ಬೀಚ್ ಗೇಮ್ಸ್‌ಗೆ ಕರ್ನಾಟಕದಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಂದ್ರಶೇಖರ ಹಂಚಿನಾಳ ಪ್ರತಿನಿಧಿಸುತ್ತಿದ್ದು, ಇವರಿಗೆ ಸಹಾಯಧನವಾಗಿ ಒಂದು ಲಕ್ಷ ರೂ. ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಚಂದ್ರಶೇಖರ ಅವರ ಪಾಲಕರಿಗೆ ಶುಕ್ರವಾರದಂದು ಹಸ್ತಾಂತರಿಸಿದರು.

ಪ್ರಸಕ್ತ ಸಾಲಿಗೆ ವಿಯೇಟ್ನಾಂನಲ್ಲಿ ಜರುಗಲಿರುವ ೦೫ ನೇ ಏಷಿಯನ್ ಬೀಚ್ ಗೇಮ್ಸ್‌ಗೆ (೬೦-೬೫ ಕೆ.ಜಿ. ತೂಕ ವಿಭಾಗದ ಪೆನಕಾಕ್ ಸಿಲಾಟ್ ಮಾರ್ಷಲ್ ಆರ್ಟ್ಸ್) ಭಾಗವಹಿಸಲು ಏಕೈಕ ಕನ್ನಡಿಗ ಗಂಗಾವತಿ ತಾಲೂಕಿನ ಚಂದ್ರಶೇಖರ ಹಂಚಿನಾಳ ಆಯ್ಕೆಯಾಗಿದ್ದಾರೆ. ಕೊಪ್ಪಳದಲ್ಲಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು, ವಯಕ್ತಿಕ ಕಾಳಜಿ ವಹಿಸಿ, ಕ್ರೀಡಾಪಟುವಿಗೆ ಇಲಾಖೆಯಿಂದ ಅಥವಾ ಬಾಹ್ಯ ಮೂಲದಿಂದ ಸಹಾಯಧನ ನೀಡುವುದರ ಬಗ್ಗೆ ಪರಿಶೀಲನೆ ನಡೆಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳೂ ಕೂಡ ವೈಯಕ್ತಿಕ ಕಾಳಜಿ ವಹಿಸಿ, ಬಾಹ್ಯ ಮೂಲದಿಂದ ಸಹಾಯಧನ ಒದಗಿಸಲು, ಹೊಸಪೇಟೆ ಸ್ಟೀಲ್ಸ್ ಕಂಪನಿಯವರಿಗೆ ಸಂಪರ್ಕಿಸಿ, ಕ್ರೀಡಾ ಪಟುವಿಗೆ ಆರ್ಥಿಕ ನೆರವು ಒದಗಿಸುವಂತೆ ಕೋರಿದ್ದರು. ಇದೀಗ ಹೊಸಪೇಟೆ ಸ್ಟೀಲ್ಸ್ ಕಂಪನಿಯವರು ಕ್ರೀಡಾಪಟುವಿಗೆ ೦೧ ಲಕ್ಷ ರೂ. ಗಳ ಸಹಾಯಧನವನ್ನು ಒದಗಿಸಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಶುಕ್ರವಾರದಂದು ತಮ್ಮ ಕಚೇರಿಯಲ್ಲಿ ಕ್ರೀಡಾಪಟು ಚಂದ್ರಶೇಖರ ಹಂಚಿನಾಳ ಅವರ ಪಾಲಕರಿಗೆ ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸಿದರು. ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸೇರಿದಂತೆ ಕ್ರೀಡಾಪಟುವಿನ ತರಬೇತುದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error