ವಿಜ್ಞಾನ ವಸ್ತು ಪ್ರದರ್ಶನ

ಕೊಪ್ಪಳ sw2 sw ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಿಂದ ಸಿ.ಎನ್.ಆರ್ ರಾವ್ ಸೈನ್ಸ್ ಕ್ಲಬ್‌ದಿಂದ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರದರ್ಶನವನ್ನು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಎಸ್.ಮಲ್ಲಿಕಾರ್ಜುನ ಉದ್ಘಾಟಿಸಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಿಜ್ಞಾನದ ಸಂಶೋಧನೆಯಲ್ಲಿ ತೊಡಗಬೇಕಾಗಿರುವುದು ಮುಖ್ಯವಾಗಿದೆ, ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಿ ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳು ಆಗಲು ಸಾಧ್ಯವಿದೆ ಎಂದರು. ಈ ಕಾರ್ಯಕ್ರಮದಲ್ಲಿ ಉಪಗ್ರಹ ಉಡಾವಣೆ, ಪವನ ಶಕ್ತಿಯಿಂದ ವಿದ್ಯುತ್‌ಚ್ಛಕ್ತಿ, ಸೌರ ಶಕ್ತಿಯಿಂದ ವಿದ್ಯುತ್‌ಚ್ಛಕ್ತಿ, ಪವಾಡ ಬಯಲು, ಸಿಮೆಂಟ್ ಉತ್ಪಾದನೆ, ಜನೆಟಿಕ್ಸ್, ನೈಸರ್ಗಿಕ ಇಂಧನ, ಪೈಥಾಗೋರಸ್ ನಿಯಮ, ಘನ ಕೃತಿಗಳು, ಅಣು ವಿಜ್ಞಾನ ಮುಂತಾದ ಪ್ರಾತ್ಯಕ್ಷಿಕತೆಯನ್ನು ವಿದ್ಯಾರ್ಥಿಗಳು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರುಗಳಾದ ಪ್ರೊ. ಕೆ.ರಾಘವೇಂದ್ರರಾವ್, ಪ್ರೊ. ಜಿ.ಎನ್ ಪಾಟೀಲ್, ಪ್ರೊ ಸಿ.ಎಸ್ ದೇವರಗುಡಿ ಪ್ರಾಚಾರ್ಯರಾದ ಶ್ರೀ ಎಚ್ ಪರೀಕ್ಷಿತರಾಜ್ ಪ್ರಾಧ್ಯಾಪಕರುಗಳಾದ ಶ್ರೀ ಬಿ.ಶ್ರೀನಿವಾಸ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ.ವಿರೇಶಕುಮಾರ ಎನ್.ಎಸ್, ಶ್ರೀ ಸಂತೋಷಗೌಡ ಮುಂತಾದವರು ಉಪಸ್ಥಿತರಿದ್ದರು.

Please follow and like us:
error