ರೈತರ ಸಮಾವೇಶಕ್ಕೆ ಸಜ್ಜಾಗುತ್ತಿರುವ ಕೊಪ್ಪಳ

ಕೊಪ್ಪಳ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶಕ್ಕೆ ರೈತರನ್ನು ಸ್ವಾಗತಿಸಲು ಕೊಪ್ಪಳ ನಗರ ಸಜ್ಜಾಗುತ್ತಿದೆ.

????????????????????????????????????

????????????????????????????????????

ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜಾಗುತ್ತಿದೆ.  ಸುಮಾರು 25 ರಿಂದ 30ಸಾವಿರ ರೈತ ಫಲಾನುಭವಿಗಳು ಆ. 29 ರಂದು ಕೊಪ್ಪಳ ನಗರದತ್ತ ಮುಖ ಮಾಡಲಿದ್ದಾರೆ.  ಕೃಷಿ ಭಾಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ 2014-15 ನೇ ಸಾಲಿನಿಂದ ಜಾರಿಗೆ ತಂದಿದ್ದು, ರಾಜ್ಯದ 25 ಜಿಲ್ಲೆಗಳ 131 ತಾಲೂಕುಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ಕೃಷಿಗೆ ಆದ್ಯತೆ ನೀಡಿದ್ದು, ಜಮೀನಿನಲ್ಲಿ ಮಳೆ ನೀರು ಕೊಯ್ಲು, ನೀರಿನ ಸಂಗ್ರಹಣೆ, ನೀರು ಎತ್ತುವಿಕೆ, ಲಘು ನೀರಾವರಿ, ಉತ್ತಮ ಆದಾಯ ತರುವ ತೋಟಗಾರಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ಕೃಷಿ ಭಾಗ್ಯ ಯೋಜನೆ ಒಳಗೊಂಡಿದೆ. ಒಟ್ಟಾರೆಯಾಗಿ ಮಳೆಯಾಶ್ರಿತ ಕೃಷಿಯನ್ನು ಸಂರಕ್ಷಿತ ನೀರಾವರಿ ಮೂಲಕ ಸುಸ್ಥಿರ ಕೃಷಿಗೆ ಪರಿವರ್ತಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ಈ ಹಿಂದೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಕೊಪ್ಪಳ ಜಿಲ್ಲೆಯಲ್ಲಿನ ಯೋಜನೆಯ ಯಶಸ್ವಿ ಅನುಷ್ಠಾನ ಹಾಗೂ ಸಾಫಲ್ಯತೆಯನ್ನು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿಯೇ ರೈತ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಬೇಕೆನ್ನುವುದು ಮುಖ್ಯಮಂತ್ರಿಗಳು, ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಆಶಯವಾಗಿದೆ.  ಸಮಾವೇಶ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ. 29 ರಂದು ಕೊಪ್ಪಳ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರಸ್ತೆಯಲ್ಲಿ ಉಂಟಾಗಿದ್ದ ತೆಗ್ಗುಗಳನ್ನು ಡಾಂಬರೀಕರಣ ಕಾಮಗಾರಿ ಮೂಲಕ ಮುಚ್ಚಿ ಸಮತಟ್ಟುಗೊಳಿಸುವ ಕಾರ್ಯವೂ ನಡೆದಿದೆ.  ಕೊಪ್ಪಳದಲ್ಲಿ ಜರುಗಲಿರುವ ರೈತ ಫಲಾನುಭವಿಗಳ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿಶೇಷ ಕಾಳಜಿ ವಹಿಸಿ, ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದು, ವಿವಿಧ ಇಲಾಖಾಧಿಕಾರಿಗಳು ಸಮಾವೇಶ ಮುಕ್ತಾಯವಾಗುವವರೆಗೂ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Please follow and like us:
error

Related posts

Leave a Comment