You are here
Home > Koppal News-1 > koppal news > ರೈತರ ಸಮಾವೇಶ ಕೃಷಿಗೆ ಉತ್ತೇಜನ ನೀಡುವಂತಿರಲಿ- ಸಚಿವ ಬಸವರಾಜ ರಾಯರಡ್ಡಿ

ರೈತರ ಸಮಾವೇಶ ಕೃಷಿಗೆ ಉತ್ತೇಜನ ನೀಡುವಂತಿರಲಿ- ಸಚಿವ ಬಸವರಾಜ ರಾಯರಡ್ಡಿ

s   ಕೊಪ್ಪಳದಲ್ಲಿ ಆ. 29 ರಂದು ಜರುಗಲಿರುವ ಕೃಷಿ ಭಾಗ್ಯ ಯೋಜನೆಯ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶಕ್ಕೆ ಸಂಬಂಧಿಸಿದಂತೆ ಕುಷ್ಟಗಿಯ ಸಕ್ರ್ಯೂಟ್ ಹೌಸ್‍ನಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ  ಅವರು ಮಾತನಾಡಿದರು.

ರಾಜ್ಯದ ಕೃಷಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಕೃಷಿ ಭಾಗ್ಯ ಯೋಜನೆಯ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶವನ್ನು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದಾರೆ. ರೈತ ಫಲಾನುಭವಿಗಳ ಸಮಾವೇಶ, ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವುದರ ಜೊತೆಗೆ, ರೈತರಿಗೆ ಕೃಷಿ ಬಗ್ಗೆ ಪ್ರೇರಣೆ ದೊರೆಯುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಬೇಕು. ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ 12 ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಹಾಗೂ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಸಚಿವರುಗಳು ಆಗಮಿಸಲಿದ್ದಾರೆ. ಸಮಾವೇಶ ನಡೆಯುವ ಸ್ಥಳದಲ್ಲಿ ಕೃಷಿಕರಿಗೆ ಮಾಹಿತಿ ದೊರೆಯುವಂತಹ ಮಳಿಗೆಗಳು, ನೀರಾವರಿ ವ್ಯವಸ್ಥೆ, ಆಧುನಿಕ ಕೃಷಿ ಯಂತ್ರೋಪಕರಣಗಳ ಮಾಹಿತಿ ದೊರೆಯುವುದರ ಜೊತೆಗೆ, ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ಮಾದರಿ ಪ್ರಾತ್ಯಕ್ಷಿಕೆ ಲಭಿಸುವಂತಾಗಬೇಕು. ದೂರದ ಜಿಲ್ಲೆಗಳಿಂದ ಆಗಮಿಸುವ ರೈತರಿಗೆ ವಾಹನದ ವ್ಯವಸ್ಥೆ, ಉಪಹಾರದ ವ್ಯವಸ್ಥೆ ಸಮರ್ಪಕವಾಗಿ ದೊರೆಯಬೇಕು. ಮುಖ್ಯಮಂತ್ರಿಗಳು, ಮಂತ್ರಿ ಮಹೋದಯರನ್ನು ಆಹ್ವಾನಿಸಲು, ಸಮಾವೇಶವನ್ನು ಆಕರ್ಷಕಗೊಳಿಸಲು ದೇಸಿ ಸಂಸ್ಕøತಿಯನ್ನು ಬಿಂಬಿಸುವ ಜಗ್ಗಲಿಗೆ, ನಂದಿಧ್ವಜ, ಡೊಳ್ಳು ಕುಣಿತ, ಕರಡಿ ಮಜಲು, ಪೂರ್ಣಕುಂಭ ಸ್ವಾಗತ ಸೇರಿದಂತೆ ಸುಮಾರು 10 ರಿಂದ 15 ಕಲಾ ತಂಡಗಳನ್ನು ಕರೆಯಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸುವ ಬದಲಿಗೆ, ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಆಮಂತ್ರಿತ ಸಚಿವರು, ಗಣ್ಯಮಾನ್ಯರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ರುಮಾಲು ಪೇಟವನ್ನು ಬಳಸಿದರೆ ಇನ್ನಷ್ಟು ಆಕರ್ಷಕವಾಗಿರಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಕುಷ್ಟಗಿ ತಹಸಿಲ್ದಾರ್ ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Top