ರಾಜೀವಗಾಂಧಿ ಜನ್ಮದಿನ ಎನ್‌ಎಸ್‌ಯುಐನಿಂದ ಭಾಷಣ ಸ್ಪರ್ಧೆ

ttಕೊಪ್ಪಳ- ಆ. 18.  ಜಿಲ್ಲಾ ಎನ್‌ಎಸ್‌ಯುಐ  ನೇತೃತ್ವದಲ್ಲಿ ಆಗಸ್ಟ್ 20 ರಂದು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.  ಆಗಸ್ಟ್ ೨೦ ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜೀವ ಗಾಂಧಿ ಜನ್ಮದಿನದ ನಿಮಿತ್ಯ ಸ್ಪರ್ಧೆ ನಡೆಯಲಿದ್ದು, ರಾಜೀವ ಗಾಂಧಿಯವರ ಜೀವನ ಸಾಧನೆ ಕುರಿತು 3 ನಿಮಿಷಗಳಲ್ಲಿ ಮಾತನಾಡಬೇಕು, ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವದು. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆವಹಿಸುವರು, ಡಾ|| ಎಪಿಜೆ ಅಬ್ದುಲ್ ಕಲಾಂ ಪತ್ತಿನ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಕೆ. ಎಂ. ಸೈಯ್ಯದ ಬಹುಮಾನ ನೀಡುವರು. ಪ್ರಥಮ ಬಹುಮಾನ 1000 ರೂ., ದ್ವಿತಿಯ 500 ರೂ. ತೃತಿಯ ಬಹುಮಾನ 300 ರೂ. ಮತ್ತು ಚತುರ್ಥ ಹುಮಾನ 200 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅಂದು ಬೆಳಿಗ್ಗೆ ನೇರವಾಗಿ ಬಂದು 10.30 ರೊಳಗೆ ಬಂದು ಹೆಸರು ನೊಂದಾಯಿಸಿ ಕೊಳ್ಳಬೇಕು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಮಂಜುನಾಥ ಜಿ. ಗೊಂಡಬಾಳ, ಭೀಮಾಸಾ ಬಂಗಾರಿ (ಮೊ : ೯೮೪೫೮೦೫೬೯೬) , ನಾಗರಾಜ ಕೊಡಾಲ (ಮೊ: ೯೫೩೮೩೮೯೧೭೭) ರನ್ನು ಸಂಪರ್ಕಿಸಬಹುದು.

Leave a Reply