ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಿ- ಕೆ.ಎಮ್.ಸಯ್ಯದ್

ಕೊಪ್ಪಳ : ಇಂದಿನ ದಿನಗಳಲ್ಲಿ ಸಿನೆಮಾ-ಟಿ.ವಿ ಹಾವಳಿಯಿಂದ ರಂಗಭೂಮಿ ಕಲೆಯು ನಶಿಸುತ್ತಿದ್ದು ಗಂಡು ಕಲೆ ಎಂದು ಹೆಸರಾಗಿರುವ ರಂಗಭೂಮಿ ಕಲೆಯನ್ನು ಇಂದು ಎಲ್ಲರೂ ಉಳಿಸಿ ಬೆಳಸಬೇಕಾಗಿದೆ ಎಂದು ಸೈಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಕೆ.ಎಮ್.ಸಯ್ಯದ್ ಹೇಳಿದರು.ಅವರು ಸಮೀಪದ ಭಾಗ್ಯನಗರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ರಾತ್ರಿ ಶ್ರೀಗುರು ಬಸವೇಶ್ವರ ಯುವಕ ಮಂಡಳದವರಿಂದ ಸಿಡಿದೆದ್ದ ಸಹೋದರರು ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಇಂದು ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲೆಯನ್ನು ಹೆಚ್ಚು ಇಷ್ಟ ಪಡುತ್ತಾರೆ ಅಲ್ಲಿ ಕಲಾವಿದರು ಪಾತ್ರಗಳನ್ನು ನೈಜವಾಗಿ ಅಭಿನಯಿಸಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ,ಇಂತಹ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಿದಾಗ ಅದು ಎಂದೆಂದಿಗೂ ಜೀವಂತವಾಗಿರುತ್ತದೆ, ನನಗೂ ಸಹ ನಾಟಕ ಅಂದರೆ ಬಹಳ ಇಷ್ಟ ಪಡುತ್ತೇನೆ ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಹಬ್ಬ-ಉತ್ಸವ-ಜಾತ್ರೆಗಳಿಗಾಗಿ ನಾಟಕಗಳನ್ನು ಸಿದ್ಧಪಡಿಸಿ ನಾಟಕ ಪ್ರದರ್ಶನ ಮಾಡಿ ಜನತೆ ಸಂತಸ ಪಡುತ್ತಾರೆ ಇಂಥಹ ರಂಗಭೂಮಿಯ ಗಂಡು ಕಲೆ ಉಳಿಸಿ ಎಂದರು.kmಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶ ದರಗದಕಟ್ಟಿ, ರುಕ್ಮಣ ಶ್ಯಾವಿ, ನೀಲಕಂಠಪ್ಪ ಮೈಲಿ, ಮಾಜಿ ತಾ.ಪಂ ಸದಸ್ಯ ಶ್ರೀನಿವಾಸ ಹ್ಯಾಟಿ, ಮುಖಂಡರಾದ ಕೃಷ್ಣ ಮ್ಯಾಗಳಮನಿ,ಶಿವಶಂಕರ ಮರಡಿ ಸೇರಿದಂತೆ ನಾಟಕದ ಕವಿಗಳು, ಕಲಾವಿದರು ಉಪಸ್ಥಿತರಿದ್ದ

Please follow and like us:
error