ಯಾದುಕರೋ ಕುರುಬಾನಿ

ಕೊಪ್ಪಳ. ೧೧- ಖುದಿರಾಮ ಬೋಸ ರವರ ಬಲಿದಾನ ದಿನವನ್ನು ಸರಕಾರಿ ಪ್ರೌಢಶಾಲೆ ಹೊಸಬಂಡಿ ಹರ್ಲಾಪೂರ ಶಾಲೆಯಲ್ಲಿ ಯಾದ ಕರೋ ಕುರುಬಾನಿ ಕಾರ್ಯಕ್ರಮದಲ್ಲಿ  ಆಚರಿಸಲಾಯಿತು. ಈ ಸಂದರ್ಭದಲ್ಲಿ ಹುತ್ಮಾತ ಖುದಿರಾಮ್ ಬೋಸ್ ರವರ ಜೀವನ ಸ್ವಾತಂತ್ರ್ಯ ಹೋರಾಟದ ಹಾದಿಯ ಕುರಿತು ವಿದ್ಯಾರ್ಥಿಗಳಿಗೆ ಪ್ರಸನ್‌ಕುಮಾರ ಶಿಕ್ಷಕರು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿದರು. ಎಸ್.ಎಸ್.ಸುಂಕದ ಮುಖ್ಯ ಗುರುಗಳು ಈ ಸಂದರ್ಭದಲ್ಲಿ ಮಾತನಾಡಿ, ‘ಈ ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವನ್ನು ಬಲಿದಾನ ಮಾಡುವುದರ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನಗೈದ ವೀರ, ಶೂರ, ಧೀರ ಖುದಿರಾಮ ಬೋಸ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆ, ಭಾರತೀಯರ ಮೇಲೆ ಕನಿಕರವಿಲ್ಲದೆ ದಾಳಿ ನಡೆಸುತ್ತಿದ್ದ ಕಿಂಗ್ಸ್‌ಪೋರ್ಡ್ ಎಂಬ ಆಂಗ್ಲ ಅಧಿಕಾರಿಯನ್ನು ಒದಿಸಬೇಕೆಂದು ಹಲವಾರು ಕ್ರಾಂತಿಕಾರಿಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಅದರಲ್ಲಿ ಈ ಕ್ರಾಂತಿಯ ಕಿಡಿ ಖುದಿರಾಮನು ಒಬ್ಬ, ತನ್ನ ಬಾಲ್ಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡವನಿಗೆ ಅಕ್ಕನೆ ತಾಯಿಯಂತೆ ಪೊಷಿಸಿದಳು. ಇನ್ನು ಆತನಿಗೆ ಇನ್ನು ಆತನಿಗೆ ಮದುವೆ ಮಾಡಿಬಿಟ್ಟರೆ ತನ್ನ ಕರ್ತವ್ಯ ಮುಗಿಸಿದಂತೆ ಎಂಬ ಆಲೋಚನೆ ಬಂದದ್ದೆ ತಡ ತಮ್ಮನಲ್ಲಿ ಮದುವೆಯ ಪ್ರಸ್ತಾಪನೆಯನ್ನು ಮಾಡಿದಳು ಖುದಿರಾಮನಿಗೆ ಮದುವೆಗಿಂತ ಸ್ವಾತಂತ್ರ್ಯ ಕಿಚ್ಚು ಹೆಚ್ಚಾಗಿದ್ದರಿಂದ ಹೇಗೋ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಒಂದು ದಿನ ನೇರವಾಗಿ ಅರವಿಂದ್‌ಘೋಷರು ತಮ್ಮ ಬಾರೀಂದ್ರ ಗೋಷರ ಬಳಿ ಬಂದ ಖುದಿರಾಮ ತಾನು ಕಿಂಗ್ಸ್‌ಪೋರ್ಡ್‌ನ ಹತ್ಯೆ ಮಾಡುವುದಕ್ಕಾಗಿ ಸಿದ್ಧನಿರುವುದಾಗಿ ಹೇಳಿ. ಬಹಳ ಆಲೋಚಿಸಿದ ಬಳಿಕಾ ಬಾರೀಂದ್ರರರು ಆತನ ಕಾರ್ಯಚರಣೆಗೆ ಸಮ್ಮತಿಸಿದರು. ನಿಶ್ಚಿತ ದಿನದಂದು ಖುದಿರಾಮ ಮತ್ತು ಪ್ರಫುಲ್ಲ ಚಾಕಿ ಎಂಬ ೨ ಸಿಂಹದ ಮರಿಗಳು ಬೇಟೆಗೆ ಹೊರಟು ನಿಂತವು. ಕಾರ್ಯಚರಣೆಯ ನೀಲಿ ನಕ್ಷೆ ಸಿದ್ದವಾಯಿತು. ಎಂದಿನಂತೆ ಕಿಂಗ್ಸ್‌ಪೋರ್ಡ್ ಪಾಲ್ಗೊಳ್ಳುವ ಕ್ಲಬ್ ಒಂದರ ಬಳಿ ೨ ಸಿಂಹದ ಮರಿಗಳು ಕಾದು ನಿಂತವು. ಸಮಯ ಮಿರುತಿತ್ತು ಸ್ವಲ್ಪ ಹೊತ್ತಿನಲ್ಲಿ , ಒಂದು ಕುದರೆ ಗಾಡಿ ಬರುವುದು ಕಾಣಿಸಿತು. ೨ ಸಿಂಹಗಳ ಕಂಠದದಿಂದ ಜೈ ಮಹಾಕಾಳಿ ಘೋಷಣೆ ಮೊಳಗಿತು ಖುದಿರಾಮನ ಕೈಯಲಿದ್ದ ಬಾಂಬ್, ಕುದರೆ ಗಾಡಿಗೆ ಬಡೆಯಿತು. ಭಾರತ ಇತಿಹಾಸದಲ್ಲಿ ಮೊದಲ ಬಾಂಬಿನ ಧ್ವನಿ ಕೆಳಿಸಿತು. ಕಿಂಗ್ಸ್‌ಪೊರ್ಡಿನ ಆಯಸ್ಸು ಗಟ್ಟಿಯಿತ್ತು, ಆ ಕುದರೆ ಗಾಡಿಯಲ್ಲಿ ಆತ ಇರಲಿಲ್ಲ ಆ ಗಾಡಿಯಲ್ಲಿ ಆತ ಇರಲಿಲ್ಲ ಬೇರೆ ವಿದೇಶಿ ಸ್ತ್ರೀಯರು ಇದ್ದರು. ಖುದಿರಾಮ ಮತ್ತು ಪ್ರಫುಲ್ಲ ಬೇರೆ ಬೇರೆ ಮಾರ್ಗದಲ್ಲಿ ಹೋದರು ಬ್ರಿಟಿಷರ ಪಾಲಿಗೆ ಇದು ಬಯಂಕರ ಸವಾಲಿನ ಘಟನೆಯಾಯಿತು. ಸೂರ್ಯ ಮುಣಗದ ಸಾಮ್ರಜ್ಯದ ವಿರುದ್ದ ಭಾರತಿಯ ಪೊರರು ತೊಡೆತಟ್ಟಿ ಸಮರ ಸಾರಿದರು ಎಂದು ಖುದಿರಾಮ ಬೋಸ್ ಅವರ ಬಗ್ಗೆ ಅಚ್ಚುಕಟ್ಟಾಗಿ ಮಕ್ಕಳಿಗೆ ತಿಳಿಸಿದರು. ಆದರೆ ವಿಧಿವಶ ಅವರನ್ನು ಗಲ್ಲಿಗೆ ಎರಿಸಲಾಯಿತು. ಸೇನಾನಿಗಳನ್ನು ನೆನಪಿಸಿಕೊಂಡು ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, bandiಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Please follow and like us:
error