ಯಶಸ್ಸಿಗೆ ಕೀಳರಿಮೆ ತ್ಯಜಿಸಬೇಕು – ಕಲ್ಲೆಶ ಬಿ

????????????????????????????????????

ಕೊಪ್ಪಳ : ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನಮ್ಮಲ್ಲಿ ಕೀಳರಿಮೆ ಇರಬಾರದು. ನಾನು ಸಾಧಿಸಿಯೇ ತೀರುತ್ತೇನೆ ಎಂಬ ಸಂಕಲ್ಪದೊಂದಿಗೆ ಮುಂದುವರೆದರೆ ಎಂತಹ ಕಠಿಣ ಗುರಿಯನ್ನಾದರೂ ತಲುಪಬಹುದು. ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೆಶ ಬಿ ಹೇಳಿದರು.

????????????????????????????????????

ಕೊಪ್ಪಳ ನಗರದ ಸಾಹಿತ್ಯ ಭವನ ಅಶೋಕ ಸರ್ಕಲ್‌ನಲ್ಲಿ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಹಾಗೂ ಕ್ಲಾಸಿಕ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್, ಧಾರವಾಡ ಇವರ ಸಹಯೋಗದಲ್ಲಿ ರವಿವಾರ (ದಿ: ೧೮-೯-೧೬) ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಮಾತನಾಡುತ್ತ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಎಷ್ಟು ಬೇಗ ವಿದ್ಯಾರ್ಥಿಗಳು ತಿಳಿವಳಿಕೆಯನ್ನು ಪಡೆಯುತ್ತಾರೋ ಅಷ್ಟು ಬೇಗ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.ಮತ್ತೋರ್ವ ಅತಿಥಿ ಗಣೇಶ ಎಸ್ ಎಸ್ ಸಿ ಪಿ ಐ ಕೊಪ್ಪಳ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ತರಬೇತಿ ಅವಶ್ಯ. ತರಬೇತಿ ಸಂಸ್ಥೆಗಳಲ್ಲಿನ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ನಾವು ಪರೀಕ್ಷೆಗಳಲ್ಲಿ ತಪ್ಪು ಮಾಡದಂತೆ ಸಹಾಯ ಮಾಡುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪರ್ಧಾ ಸ್ಫೂರ್ತಿ ಪ್ರಧಾನ ಸಂಪಾದಕ ಹಾಗೂ ಕ್ಲಾಸಿಕ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮಣ ಉಪ್ಪಾರ ಅವರು ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಅವುಗಳಲ್ಲಿ ಯಶಸ್ಸು ಪಡೆಯಲು ಯೋಜನಾಬದ್ಧ ತಯಾರಿ ಮಾಡಬೇಕು ಎಂದರು.ಕ್ಲಾಸಿಕ್ ಸಂಸ್ಥೆಯಿಂದ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಶಿವಕುಮಾರ ಮೆಣಸಗಿ ಪಿ ಡಿ ಓ ರೋಣ , ಪಂಚಾಯತ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ವಿಷಯ ಕುರಿತು ಉಪನ್ಯಾಸ ನೀಡಿದರು. ವ್ಯಕ್ತಿತ್ವ ವಿಕಸನ ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವದ ಕುರಿತಾಗಿ ರಮೇಶ ಉಮ್ರಾಣಿ ಹಾಗೂ ಸುರೇಶ ಕುಲಕರ್ಣಿ ಉಪನ್ಯಾಸ ನೀಡಿದರು., ಇತಿಹಾಸ ಕುರಿತು ಮೋಹನ ಶಿಂಧೆ, ಕನ್ನಡ ಕುರಿತು ಡಾ! ಈಶ್ವರ ಸಾತಿಹಾಳ, ಶಿವಕುಮಾರ ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು. ಸಂಯೋಜಕರಾದ ಹಾಗೂ ಕಾಂiiಕ್ರಮ ಸಂಘಟಕರಾದ ರಾಘವೇಂದ್ರ ರಾಯರಡ್ಡಿ ಇದ್ದರು. ೧೫೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error