ಮೊಂಬತ್ತಿ ಹಚ್ಚುವ ಮೂಲಕ ಮೌನಾಚರಣೆ

ಕೊಪ್ಪಳ- ಕಾಶ್ಮೀರದ ಉರಿ ಎಂಬ ಸೇನಾ ನೆಲೆ ಮೇಲೆ ಮಾಡಿದ ದಾಳಿಯಲ್ಲಿ ಭಾರತೀಯ ೧೮ ಯೋಧರು ಹುತಾತ್ಮರಾಗಿದ್ದಾರೆ. ಆ ಹುತಾತ್ಮ ಯೋಧರಿಗೆ ಬಿ.ಜೆ.ಪಿ ಯುವ ಮೋರ್ಛಾದ ಕಡೆಯಿಂದ ನಗರದ ಅಶೋಕ ಸರ್ಕಲ್‌ನಲ್ಲಿ ಮೊಂಬತ್ತಿ ಹಚ್ಚುವ ಮೂಲಕ ಮೌನಾಚರಣೆ. ಈ ಸಂದರ್ಭದಲ್ಲಿ ಸಿ.ವಿ ಚಂದ್ರಶೇಖರ, ಚಂದ್ರಶೇಖರ ಕವಲೂರು, ಅಪ್ಪಣ್ಣ ಪದಕಿ, ರಾಜು ಬಾಕಳೆ, ಗವಿಸಿದ್ದಪ್ಪ ಚಿನ್ನೂರು, ಶಿವು ಹಕ್ಕಾಪಿಕ್ಕಿ ಸೇರಿದಂತೆ ಯುವ ಮೋರ್ಛಾ ಕಾರ್ಯಕರ್ತರು ಮಾತನಾಡಿ ಜಾಗತೀಕ ಭಯೋತ್ಪಾದನೆಯಲ್ಲಿ ಪಾಕಿಸ್ತಾನವು ವಿಶ್ವದ ಅಗ್ರಗಣ್ಯ ದೇಶ, ಈ ದೇಶವು ಹಲವಾರು ಭಯೋತ್ಪಾದಕರನ್ನು ತನ್ನ ಸ್ವಂತ ಮಕ್ಕಳಂತೆ ಸಾಕುತ್ತಿದೆ. ಜಾಗತಿಕವಾಗಿ ಭಯೋತ್ಪಾದನೆಯನ್ನು ವಿರೋಧಿಸುವ ನಾಟಕವಾಡುತ್ತಿದೆ. ಉರಿ ಎಂಬ ಸೇನಾ ನೆಲೆ ಮೇಲೆ ಮಾಡಿರುವ ದಾಳಿಯಲ್ಲಿ ಹಲವಾರು ಪಾಕಿಸ್ತಾನದ ಶಸ್ತ್ರಾಸ್ತ್ರಗಳು ದೊರಕಿವೆ. ಪಾಕಿಸ್ತಾನವು ಭಾರತದ ಏಳ್ಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದಕಾರಣ ಭಯೋತ್ಪಾದಕರನ್ನು ದೇಶದ ಒಳಗಡೆ ಬಿಟ್ಟು ವಿದ್ವಂಸಕ ಕೃತ್ಯಗಳನ್ನು ಮಾಡುತ್ತಿದೆ. ಜೊತೆಗೆ ಆಂತರಿಕ ಕಲಹವನ್ನು ಉಂಟುಮಾಡುತ್ತಿದೆ ಎಂದು ಹೇಳಿದರು. ಕೆಲವೆ ದಿನಗಳಲ್ಲಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುತ್ತದೆ ಎಂದು ತಿಳಿಸಿದರು. ಜಿಲ್ಲೆ, ತಾಲೂಕ, ನಗರದ ಎಲ್ಲಾ ಯುವ ಮೋರ್ಛಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.

Please follow and like us:
error