ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರ ಪ್ರಸಾದ ಸೇವನೆ

ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಪ್ರಾರಂಭವಾದ ಮಹಾದಾಸೋಹವು ಸುಸೂತ್ರವಾಗಿ ನಡೆಯಿತು. ಅಮವಾಸ್ಯೆ ದಿನವಾಗಿದ್ದರಿಂದ ಗ್ರಾಮೀಣ, ನಗರದ ಸುತ್ತ ಮುತ್ತಲಿನ ಜನತೆ ಶ್ರೀ ಮಠಕ್ಕೆ ಆಗಮಿಸಿದ್ದರು. ಮಠದ ಆವರಣವೆಲ್ಲಾ ಭಕ್ತವೃಂದದಿಂದ ತುಂಬಿತ್ತು. ಕತೃ ಗದ್ದುಗೆಗೆ ದರ್ಶನ ಮಾಡಿ, ಕಾಯಿ ಕರ್ಪೂರ ಮಾಡಿಸಿಕೊಂಡು, ನಂತರ ಇಂದು ಬೆಳಿಗ್ಗೆ ೭.೩೦ ರಿಂದಲೇ ಪ್ರಾರಂಭವಾದ ಮಹಾದಾಸೋಹಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವನೆ ಮಾಡಿದರು. ಅಮವಾಸ್ಯೆಯ ದಿನವಾದ ಇಂದು ಪ್ರಸಾದಕ್ಕೆ ಗೋದಿ ಹುಗ್ಗಿ ವಿಶೇಷ ಸಿಹಿ ತಯಾರಿಸಲಾಗಿತ್ತು. ಇಂದಿನ ಪ್ರಸಾದದಲ್ಲಿ ೫೫ ಕ್ವೀಂಟಲ್ ಸಿಹಿ, ೬೦ ಕ್ವೀಂಟಲ್ ಅಕ್ಕಿಯನ್ನು ಬಳಸಲಾಗಿದೆ. ೭ ಕೊಪ್ಪರಿಕೆಯಲ್ಲಿ ತಯಾರಿಸಿದ ಗೋಧಿ ಹುಗ್ಗಿಯನ್ನು ಸವಿದ ಸುಮಾರು ೧ ಲಕ್ಷ ಭಕ್ತರು ಧನ್ಯತಾ ಭಾವನೆಯಲ್ಲಿ ಮುಳುಗಿದ್ದು ಕಂಡು ಬಂದಿತು.

Leave a Reply