ಮನ ಸೆಳೆದ ಕೃಷ್ಣ ವೇಷಭೂಷಣ

????????????????????????????????????

 ಕೊಪ್ಪಳದ ಭಾಗ್ಯನಗರದಲ್ಲಿರುವ ಜ್ಞಾನ ಬಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯ ಅಂಗವಾಗಿ ಮಕ್ಕಳಿಗೆ ಶ್ರೀ ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಯಿತು.

jh

ಜ್ಞಾನ ಬಂಧು ಶಾಲೆ ಸಂಸ್ಥೆಯ ಸಂಸ್ಥಾಪಕ ದಾನಪ್ಪ ಕವಲೂರ, ಪ್ರಾಂಶುಪಾಲೆ ಕೆ.ರೋಜ್ ಮೇರಿ, ಮುಖ್ಯೋಪಾಧ್ಯಾನಿ ಜೋತಿಯವರು ಉಪಸ್ಥಿತಿಯಲ್ಲಿ ರಾಧೆ-ಶ್ರೀಕೃಷ್ಣರ ವಿವಿಧ ವೇಷಧಾರಿಗಳನ್ನು ಕಣ್ಮನ ಸೆಳೆಯುವ ಮುದ್ದು ರಂಗನನ್ನು ಹಾಗೂ ಶ್ರೀಕೃಷ್ಣನ ಜನ್ಮ ಕಥೆಯನ್ನು, ಬಾಲಲೀಲೆಗಳನ್ನು, ಧರ್ಮಕ್ಕಾಗಿ ಜನಿಸಿದ ಅವತಾರ ಪುರುಷನ ಸಾಹಸ ಕಥೆಗಳನ್ನು ಸಹ-ಶಿಕ್ಷಕ ಶಿವರಾಜ ಏಣಿಯವರು ಮಕ್ಕಳ ಮನಮುಟ್ಟುವಂತೆ ಹೇಳಿದರು. ಶ್ರೀಕೃಷ್ಣ ಪರಮಾತ್ಮನು ನಿರ್ದಿಷ್ಟ ಕಾರ್ಯಕ್ಕಾಗಿ ಈ ಭೂಮಿಯಲ್ಲಿ ಅವತರಿಸಿ ಅಧರ್ಮ, ಅಸತ್ಯ, ಅನೀತಿಗಳನ್ನು ನಿರ್ನಾಮ ಮಾಡಿದ ಮಹಾ ಪುರುಷೋತ್ತಮ. ಧರ್ಮೋ ರಕ್ಷಿತಿ ರಕ್ಷಿತಃ ಎಂದು ಮನುಷ್ಯ ಧರ್ಮವನ್ನು ಜಗತ್ತಿಗೆ ಸಾರಿದ ವಿರಾಟರೂಪಿ ಶ್ರೀಭಗವಂತ. ಶ್ರೀಕೃಷ್ಣನ ಆದರ್ಶ, ರೀತಿ-ನೀತಿಗಳನ್ನು ಮಕ್ಕಳಲ್ಲಿ ಬೆಳೆಸೋದು ನಮ್ಮೆಲ್ಲರ ಅಭಿಲಾಷೆಯಾಗಲಿ ಎಂದರು. ಸಮಾರಂಭದಲ್ಲಿ ಪಾಲಕ ಪೋಷಕರು ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Please follow and like us:
error