ಮನುಷ್ಯ ಜೀವನ ಇಬ್ಬನಿಯ ಹನಿ – ಗವಿಶ್ರೀ

ಕೊಪ್ಪಳ: ಮನುಷ್ಯ ಜೀವನ ಕ್ಷಣಿಕ, ಗಾಳಿಗಿಟ್ಟ ದೀಪ ಇದ್ದಂತೆ ಬೆಳಗ್ಗೆ ಹುಲ್ಲಿನ ಮೇಲೆ ಇಬ್ಬನಿಯ ಹನಿ ಮುತ್ತಿನಂತೆ ಹೋಳೆಯುವತ್ತಿರುತ್ತದೆ. ಆದರೆ ಗಾಳಿ ಬಂದಾಗ ಹುಲ್ಲಿನ ಮೇಲಿನ ಪ್ರಕಾಶ ಮಾನದವಾದ ಹನಿ ಜಾರಿ ಮಣ್ಣೊಳಗೆ ಬಿದ್ದು ಮಣ್ಣಾಗಿ ಹೋಗುತ್ತದೆ. ಹಾಗಯೇ ಮನುಷ್ಯನ ಜೀವನವು ಸಹಿತ ಅಧಿಕಾರಿ ಸಂಪತ್ತು, ಹೋಗುತ್ತದೆ. ವೈಭವ ಒಂದು ಕ್ಷಣ ಮೆರೆಯುತ್ತಿರುತ್ತದೆ. ಸಾವಿನ ಗಾಳಿ ಬೀಸಿಬಿಟ್ಟರೆ ಅತ್ಯಂತ ವೈಭವದ ಜೀವ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಆದ್ದರಿಂದ ಮನುಷ್ಯ ಜೀವನ ಇಬ್ಬನಿಯ ಹನಿ ಇದ್ದಂತೆ ಎಂದು ಕೊಪ್ಪಳ ಗವಿಮಠ ಶ್ರೀ.ಮ.ನಿ.ಪ್ರ.ಜ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಾತರಕಿಯಲ್ಲಿ ಜರುಗಿದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಹಾಗೂ ಲಘು ರಥೋತ್ಸವಕ್ಕೆ ಚಾಲನೆನೀಡಿ ಧಾರ್ಮಿಕ ಸಭೆಯವಹಿಸಿ ಸಾನಿಧ್ಯ ವಹಿಸಿ ಮಾತನಾಡುತ್ತಾ ಹುಟ್ಟು ಸಾವುಗಳ ಮಧ್ಯದ ಬದುಕನ್ನು ಸಾರ್ಥಕತೆ ಮಾಡಿಕೊಳ್ಳಬೇಕಾದರೆ ಜೀವನದಲ್ಲಿ ದು:ಖ ದೂರ ನಿರಾಶೆ, ನೋವು ಚಿಂತಾಮಾಡಿಕೊಂಡ ಸಾರ್ಥಕತೆ ಮಾಡಿಕೊಳ್ಳಬೇಕಾದರೆ ಜೀವನದಲ್ಲಿ ದುಃಖ, ನಿರಾಶೆ, ನೊವು, ಚಿಂತೆ, ಅಸಮಧಾನ, ಇವುಗಳಿಂದ ಮುಕ್ತವಾಗಬೇಕಾದರೆ ದುಃಖ ದೂರಮಾಡಿಕೊಂಡು ಸಂತೊಷದಿಂದ ಬದುಕಬೇಕಾದರೆ ದುಃಖದಿಂದ ಚಿಂತೆ ಮಾಡುತ್ತಾ, ಜಗಳವಾಡುತ್ತಾ ಸಾಮದಾನದ ಕೊರತೆಯಿಂದ ನೂರಾರು ವರ್ಷ ಬದುಕಿದ, ಆದರೆ ಒಂದು ಹೂ ಬೆಳಗ್ಗೆ ಅರಳಿ ಸಾಯಂಕಾಲದ ಒಳಗೆ ಬಾಡಿ ಹೊಗುತ್ತದೆ ಮನುಷ್ಯ ಬದುಕಿದಾಂಗ ನುರಾರು ವರ್ಷ ಆತಗೊಂತ ಹೂ ಬದುಕುವುದಲ್ಲ ಒಂದೆ ದಿನ ಹೂವು ಬದುಕಿದರೂ ದೇವರ ತೆಲೆಯ ಮೇಲೆ ಹೇರಿ ಕುಂತುಕೊಂಡು ಜೀವನ ಸಾಮ್ಯರ್ಥಮಾಡಿಕೊಳ್ಳುತ್ತದೆ.
ಮನುಷ್ಯ ಜಿವನ ಸಾಮಾರ್ಥ್ಯಕವಾಗಬೇಕಾದರೆ ಹಸಿದು ಬಂದವರಿಗೆ ಅನ್ನ ದುಃಖದಿಂದ ಇರುವ ಮನುಷ್ಯನಿಗೆ ನಾನು ನಿನ್ನ ಜೊತೆಗೆ ಇದ್ದೇನೆ ಎಂದು ಧರ್ಯ್ಯದ ಮಾತು ಸಾಕು. ಇನ್ನೊಬ್ಬರ ಮನೆಯ ಮುಂದೆ ಹೋಗಿ ಕೈಹೊಡ್ಡಿ ಬೇಡದಂತೆ ದೇವರು ಕೊಟ್ಟಿದ್ದರಲ್ಲಿ ಮತ್ತೊಬ್ಬರಿಗೆ ಒಂದು ತುತ್ತು ಉಣಿಸಿ ಸಂತೊಷ ಪಡಬೇಕು.g1 ನಿಸರ್ಗದಲ್ಲಿ ಇರುವ ತಾನು ಹರಿದು ಜನರಿಗೆ ನಿರು ಕೊಡುತ್ತದೆ ಭೂಮಿಯ ಮೇಲೆ ಬೆಳದ ಗಿಡ, ಮರ, ಸಸಿ, ತಾನು ಬೆಳದು ಇತರರಿಗೆ ಫಲ ಕೊಡುತೈತಿ ಆಕಳು ತನ್ನ ಹಾಲು ಕುಡಿಯಲ್ಲ ಜಗತ್ತಿಗೆ ಅಮೃತ ಕೊಟ್ಟು ತಾನು ದೊಂಟು ತಿಂತೈತಿ ಅದೇ ರಿತಿ ತಾಯಿ ತಾನು ಉಣಕೊಂತ ಪ್ರೀತಿಯಿಂದ ಮಗುವಿನ ಹೊಟ್ಟೆಯನ್ನು ತುಂಬಿಸುತ್ತಾಳೆ ತಾಯಿಯಾಗಿ ತಾನು ದುಡಿದು ಸಂಪತ್ತನ್ನು ಮಗುವಿನೋಪಾದಿಯಲ್ಲಿರುವ ಜಗತ್ತಿಗೆ ಒಂದೊಂದು ತುತ್ತು ತಿನಿಸುತ್ತಿರಬೇಕು ಅದು ಸಾರ್ಥಕ ಬದುಕು ಎಂದರು.
ಈ ಕಾರ್ಯಕ್ರಮದಲ್ಲಿ ಕಪ್ಪದ ಮಠದ ಶ್ರೀ ಮ.ನಿ.ಪ್ರ.ಸ್ವ.ಜ ಚಿದಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಯಿಸಿದ್ದರು, ಷ,ಭ್ರ ೧೦೮ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಇಗಳು ಉಜ್ಜಯನಿ ಶಾಖಾ ಮಠ ಮೈನಳ್ಳಿ ಇವರ ನೇತೃತ್ವವಹಿಸಿ ಆರ್ಶಿವಚನ ನೀಡಿದರು, ಕಾಲಭ್ರಹ್ಮ ಸದ್ಗುರು ಶ್ರೀ ಶರಣಬಸವ ಮಾಹಸ್ವಾಮಿಗಳು ಹಿರೇಮಠ ವೀರಶ್ವರ ಮಠ ಟಣಕನಕಲ್ಲ ಆರ್ಶಿವಚನ ನೀಡಿದರು, ಮುಖ್ಯಅತಿಥಿಗಳಾಗಿ ಶ್ರೀ.ಷ. ಬ್ರ, ಶ್ರೀ ಚಂದ್ರಾಮಪ್ಪ ಕಣಕಾಲ, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಲ್ ಹಿರೇಗೌಡ್ರು, ನಿವೃತ್ತ ಮುಖ್ಯೋಪಾದ್ಯಾಯರಾದ ಬಾಳನಗೌಡ ಪೋ.ಪಾ, ಶಿವಾನುಭವ ಸಮಿತಿ ಅಧ್ಯಕ್ಷ ಕೊಟ್ರಯ್ಯ ಅಬ್ಬಿಗೇರಿ ಮಠ, ರಾಜು ಹಿರೇಮಠ, ಗುಡ್ಲಾನೂರಿನ ಕೊಟ್ರಯ್ಯ ಹಿರೇಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Please follow and like us:
error