You are here
Home > Koppal News-1 > koppal news > ಮಕ್ಕಳ ಪ್ರತಿಭೆಗೆ ಪಾರದರ್ಶಕವಾಗಿ ಪ್ರಶಸ್ತಿ ಗೌರವ ನೀಡಬೇಕು

ಮಕ್ಕಳ ಪ್ರತಿಭೆಗೆ ಪಾರದರ್ಶಕವಾಗಿ ಪ್ರಶಸ್ತಿ ಗೌರವ ನೀಡಬೇಕು

ಕೊಪ್ಪಳ – ಮಕ್ಕಳಲ್ಲಿ ಅದ್ಬುತವಾದ ಪ್ರತಿಭೆ ಹುದುಗಿರುತ್ತದೆ. ಅದಕ್ಕೆ ಸೂಕ್ತವಾದ ಪ್ರೇರಣೆ ನೀಡಿದರೆ ಅವರಿಂದ ಉತ್ತಮವಾದ ಸಾಧನೆ ಸಾಧ್ಯವಾಗುತ್ತದೆ. ಅದರಲ್ಲೂ ಗ್ರಾಮೀಣ ಮಕ್ಕಳಲ್ಲಿ ಸಹ ವಿಶಿಷ್ಟ ಪ್ರತಿಭೆ ಇರುತ್ತೆ. ಅಂತವರನ್ನು ಗುರುತಿಸಿ ಪ್ರತಿಭೆಗೆ ಪಾರದರ್ಶಕವಾಗಿ ಪ್ರಶಸ್ತಿ ಗೌರವ ನೀಡಬೇಕು ಎಂದು ಗೊಂಡಬಾಳ ಜಿಲ್ಲಾ ಪಂಚಾಯತ್ ಸದಸ್ಯ ಗೂಳಪ್ಪ ಹಲಗೇರಿ ಹೇಳಿದರು. ಅವರಿಂದು ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಪೂರ್ವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಿಡಕ್ಕೆ ನೀರು ಹಾಕುವದರ ಮೂಲಕ  ಉದ್ಘಾಟಿಸಿದ ಲೇಬಗೇರಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಮಕ್ಕಳ ಪ್ರತಿಭೆಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವ ವೇದಿಕೆ ಪ್ರತಿಭಾ ಕಾರಂಜಿ. ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿರುವ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದು ಹಾರೈಸಿದರು. ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಎಸ್.ಬಿ.ಕುರಿ, ಸಿಆರ್ ಪಿ ಪೂರ್ಣಿಮಾ, ಬಸವರಾಜ ಕಮಲಾಪೂರ, ನಗರಸಭಾ ಸದಸ್ಯರಾದ ಮಲ್ಲಪ್ಪ ಕವಲೂರ, ಶ್ರೀಮತಿ ರೇಣುಕಾ ಅತ್ತನೂರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ. ಮಕ್ಕಳ ಪ್ರತಿಭೆ ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು , ಶಿಕ್ಷಕ -ಶಿಕ್ಷಕಿಯರು ಭಾಗವಹಿಸಿದ್ದರು.

Leave a Reply

Top